ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Sunday, May 29, 2011

ಭಾವಕಾಧಾರ..!!


ನಿನ್ನ ನೆನೆಯಲದುವೆ ಗೆಳತಿ,
ಮನದಿ ದೀಪ ಬೆಳಗಿದಂತೆ.
ನಗೆಯ ಬಿರಿಯೆ ಸಾಕು ಅದುವೆ,
ತಾರೆ ನಯನದಿ ನೆಲೆಸಿದಂತೆ..
            ಒಮ್ಮೆ ಗಾಳಿ ಸೋಕಲದುವೆ,
            ನಿನ್ನ ಸನಿಹ ರಮಿಸಿದಂತೆ.
            ಹಿಮದ ಬಿಂದು ತಾಕಲದುವೆ,
            ವಿರಹ ಜ್ವರವೇ ಜಾರಿದಂತೆ..
ಕಣ್ಣ ನೋಟ ಬೀರಲದುವೆ,
ಹೃದಯ ವೀಣೆ ನುಡಿಸಿದಂತೆ.
ನಿನ್ನ ಹೆಸರ ಜಪಿಸಲದುವೆ,
ಮನದಿ ಧೈರ್ಯ ಸ್ಫುರಿಸಿದಂತೆ..
             ಹೇಗೆ ತಿಳಿಸಲೇಳು ಗೆಳತಿ,
             ಜೀವ ಸಿಂಧು ನೀನೆಂಬುದನು?
             ಬಾಳ ನೌಕೆ ತೆರಳುತಿರಲು,
             ಚಲಿಸೋ ನಾವಿಕಳು ನೀನೆಂಬುದನು..?

No comments:

Post a Comment