ಮನದ ಮಾತನಾಲಿಸದೆ,
ಸನ್ನೆಗಳನು ಗಮನಿಸದೆ,
ಒಲವ ಹರಿಸೆ ಅನುಭವಿಸದ
ಜಟಿಲ ಮುಗ್ಧೆ ನನ್ನಾಕೆ.!
ಬಂಧ ಪಡೆಯೇ ಯೋಚಿಸೆ,
ಅಗಲಿಕೆಗೆ ಬಲು ದುಃಖಿಸೆ,
ಒಲವ ಪಡೆಯೆ ಕಟಿಣವೆನಿಪ
ಸೂಕ್ಷ್ಮಮತಿ ನನ್ನಾಕೆ.!
ಜರಿವುದ ತಾನು ಸಹಿಸದೆ,
ಜರಿದವರೆದುರು ನಟಿಸದೆ,
ಮೌನದಿಯೇ ಹಲುಬುವ ಪರಿ
ಹಠ, ಕೋಪಿಷ್ಟೇ ನನ್ನಾಕೆ.!
ಧ್ಯೇಯ ಮಾತ್ರವನರಿಯೆ, ಬಲು
ಹಾದಿಯಲಿ ಅಲೆದ ಭಾವನೆಯ,
ಅನುಭವದ ಮೋಡಿಯಲಿ ಬೆಸೆದು
ಬಂಧಿಸಿಹಳು ನನ್ನಾಕೆ.!
No comments:
Post a Comment