ಮೆಚ್ಚಿದ ಮನ ನೆಚ್ಚಿಕೊಂಡ ಹುಚ್ಚು ಪ್ರೀತಿ ಹೆಚ್ಚುತ,
ಕಿಚ್ಚಿನ ತರ ಹಚ್ಚಿಕೊಂಡ ಭಾವ ಸಂಚಿ ಬಿಚ್ಚುತ,
ಹೆಚ್ಚು ಕಾಡಲಿಕ್ಕೆ ಕಣ್ಣಂಚಿನಲ್ಲಿ ನಾಚುತ - ನೀನು, ಸಂಚು ಮಾಡಿ ದೋಚಿದೆ..
ಹೊಚ್ಚ ಹೊಚ್ಚ ಭಾವ ಮೂಡಿ ಹೂಗುಚ್ಚವ ನೀಡುತ,
ಅಚ್ಚು ಅಳಿಯದಂತ ಪ್ರೀತಿ ಹೆಸರ ಹಚ್ಚೆ ಗೀಚುತ,
ಬಾಚಿ ತಂದ ಕಪ್ಪೆಚಿಪ್ಪು ಮುತ್ತು ನೀನೆ ಎನ್ನುತ - ನಾನು, ನಿನ್ನೆಡೆಗೆ ಕೈ ಚಾಚಿದೆ