ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Saturday, January 4, 2020

ಬದುಕಿನ್ ಆಟ ...ಸಾವಿನ್ ಪಾಠ ...!!

ಕುಂತ್ಕೊಂಡ್ ಬಕ್ಕೊಂಡ್ ಕೂಳೆ ಕಿತ್ರೂ
ಇಲ್ಲ ಹೊತ್ತಿನ್ ಊಟ..
ಉರ್ಯೋ ಸೂರ್ಯನ್  ಹೊಟ್ಟೆ ಕೆಳ್ಗೆ ಹುಟ್ಟು ಸಾವಿನ್ ಆಟ..
ಕಲ್ತು ಕಲ್ತು ಮುದ್ಕಾದ್ರೂನು ನೆತ್ತಿಗೇರ್ದು ಪಾಠ ..
ಸತ್ತು ಸತ್ತು ಹುಟ್ಟೊವ್ರ್ಗೆಲ್ಲ ಬದುಕೇ ಬಗ್ನೀ ಗೂಟ  ...!!!

Friday, January 3, 2020

ನೋವು..ತಂಗಳು..!!

ಬೇಸರಕೆ ಮನದಲಿ
ಜಾಗ ಬೇಡ ತಂಗಲು,
ಹೊಸತು ದಿನವು ಖುಷಿಗೆ ಬಾಗ್ಲು
ಬೇಕೆ ನೋವ ತಂಗಳು..!!?