ಚೆಂದಾದ ಮೂಗುತ್ತಿ ಹೊತ್ತಿದಾ ನನ ರತಿಯೇ,
ಕಿವಿಯೋಲೆ ಝಲಕಿಸುವ ಸಿಂಗಾರಿಯೇ...
ಕೊರಳಾಗೆ ಮಿರಿ ಮಿರುಗೊ ಸರದೊಡತಿ ಸರಸತಿಯೇ,
ಒಡ್ಯಾಣ ನಡುವಣದಿ ಬಿಗುಮಾನಿಯೇ...
ಕರದಾಗೆ ಕಲರವಿಸೊ ಬಳೆಯೊಡತಿ ಬಂಗಾರಿ,
ಕಾಲ್ಗೆಜ್ಜೆ ದನಿಯೊಡತಿ ರಸವಾಣಿಯೇ...
ಹಣೆಗೆ ಕುಂಕುಮವಿಟ್ಟ ಪಡುವಣದ ರವಿ ಕಿರಣೆ,
ಕಾಡಿಗೆ ಕಣ್ಣೋಳೆ ಮನದರಸಿಯೇ...
No comments:
Post a Comment