ಸಾಹಿತ್ಯ ಲೋಕಕ್ಕೆ ಅಂಬೆಗಾಲಿಡುತ್ತಿರುವವನ ಮೊದಲ ಅರ್ಪಣೆ...
ಊರಿಗೇ ನೆರಳಾ ಕೊಡುವಂಥ ಮರಕೆ
ಬಿರುಗಾಳಿ ಬಂದು ರಪ್ಪೆಂದು ಬಡಿದಾಗ -
ಉರುಳುವಾ ಜಾಗ ಸಿಗದಾಗಿದೆ.!
ಸಂತಾಪ ತೋರಿ ಸಂತೈಸೊ ಕೈಗೆ
ಮೊನಚಾದ ಮುಳ್ಳು ತಾನೊಂದು ಇರಿದಾಗ -
ನೇವರಿಸೊ ಕೈಯೊಂದು ಇರದಾಗಿದೆ.!