ಮಲಗಿದ್ದೆ ನಾನು ನಿನ್ನ ಗುಂಗಿನಲ್ಲಿ,
ಸೋಮಾರಿ ಮೈ ಚಾಚಿ ದಿಂಬೊರಗಿ ಇಲ್ಲಿ.
ಎಲ್ಲಿಂದ ಬಂತೊ ಐನಾತಿ ನಿದ್ದೆ,
ಕನಸಲ್ಲೂ ಕೂಡ ನಿನ್ ದನಿಯ ಸದ್ದೆ.
ನಾ ನಿನ್ನ ನೋಡಲು, ಕಣ್ ಸನ್ನೆ ಮಾಡಲು,
ನೀನಂತು ನುಡಿಸಿದೆ ಸಂಗೀತ ಲಾಸ್ಯ.
ಕನಸಲ್ಲೂ ಕೂಡ ಏನ್ ಚೆಂದ ಹಾಡುತಿ,
ಸಂಗೀತಕೆ ಬರೆದೆ ನೀ ಹೊಸತು ಭಾಷ್ಯ.
ಕಂಠವದು ನಿನ್ನದು ವೀಣೆಯದು ನುಡಿದಂತೆ,
'ಸುಂಯ್' ಎಂದು ಸ್ವರಗಳ ಬಾಣವದು ಹೊರಟಂತೆ.
ಸ್ವರಗಳಲೆ ಹಿಡಿದಿಟ್ಟು ಬಂಧಿಸಿರೆ ನೀನು,
ನಿನ್ನ ಸಾಮಿಪ್ಯವನು ಬಯಸಿಹೆನು ನಾನು.
ಹಾಡಿನ ದನಿಯದುವೆ ಸನಿಹದಲಿ ಬಂತೆನಿಸಿ,
ನಿನ್ ಅಧರ ಕೆನ್ನೆಯ ಮೋಹಿಸಿದೆ ಎಂದೆನಿಸಿ ;
ಕೊಡುವೆ ನೀ ಅನಿಸಿರಲು ಸಿಹಿಯಾದ ಜೇನು,
ನಲುಮೆಯಲಿ ಔತಣಕೆ ಅಣಿಯಾದೆ ನಾನು.
'ಗುಂಯ್' ಎಂಬ ಅಪಸ್ವರವು ಕಿವಿಯೊಳಗೆ ಗುನುಗಿರಲು,
ನಿನ್ ಕಂಠ ಕುಂಟಿದಕೆ ನಾನಂತು ಮರುಗಿರಲು.
ಅಪಸ್ವರವು ತುಟಿಗಳಿಗೆ ಎಲ್ಲಿಂದ ಬಂದಾತು?
ಎಂದೆನುತ ಕೆನ್ನೆಗೆ ನೀಡಿದೆ ನೀ ಸಿಹಿಮುತ್ತು..!
ಚುರ್ರ್ ಎಂಬ ಅನುಭೂತಿ ಉರಿಯೊಡನೆ ಆಗಿರಲು,
ನಿದ್ದೆಯಿಂದೆದ್ದು ಕಣ್ ತೆರೆದು ನೋಡಲು,
ಇದ್ದದ್ದು ಅಲ್ಲಿ ನೀನಲ್ಲ ನಲ್ಲೆ,
ರಕ್ತ ಪಿಪಾಸು ಧಡೂತಿ ಸೊಳ್ಳೆ..!!
ಸೋಮಾರಿ ಮೈ ಚಾಚಿ ದಿಂಬೊರಗಿ ಇಲ್ಲಿ.
ಎಲ್ಲಿಂದ ಬಂತೊ ಐನಾತಿ ನಿದ್ದೆ,
ಕನಸಲ್ಲೂ ಕೂಡ ನಿನ್ ದನಿಯ ಸದ್ದೆ.
ನಾ ನಿನ್ನ ನೋಡಲು, ಕಣ್ ಸನ್ನೆ ಮಾಡಲು,
ನೀನಂತು ನುಡಿಸಿದೆ ಸಂಗೀತ ಲಾಸ್ಯ.
ಕನಸಲ್ಲೂ ಕೂಡ ಏನ್ ಚೆಂದ ಹಾಡುತಿ,
ಸಂಗೀತಕೆ ಬರೆದೆ ನೀ ಹೊಸತು ಭಾಷ್ಯ.
ಕಂಠವದು ನಿನ್ನದು ವೀಣೆಯದು ನುಡಿದಂತೆ,
'ಸುಂಯ್' ಎಂದು ಸ್ವರಗಳ ಬಾಣವದು ಹೊರಟಂತೆ.
ಸ್ವರಗಳಲೆ ಹಿಡಿದಿಟ್ಟು ಬಂಧಿಸಿರೆ ನೀನು,
ನಿನ್ನ ಸಾಮಿಪ್ಯವನು ಬಯಸಿಹೆನು ನಾನು.
ಹಾಡಿನ ದನಿಯದುವೆ ಸನಿಹದಲಿ ಬಂತೆನಿಸಿ,
ನಿನ್ ಅಧರ ಕೆನ್ನೆಯ ಮೋಹಿಸಿದೆ ಎಂದೆನಿಸಿ ;
ಕೊಡುವೆ ನೀ ಅನಿಸಿರಲು ಸಿಹಿಯಾದ ಜೇನು,
ನಲುಮೆಯಲಿ ಔತಣಕೆ ಅಣಿಯಾದೆ ನಾನು.
'ಗುಂಯ್' ಎಂಬ ಅಪಸ್ವರವು ಕಿವಿಯೊಳಗೆ ಗುನುಗಿರಲು,
ನಿನ್ ಕಂಠ ಕುಂಟಿದಕೆ ನಾನಂತು ಮರುಗಿರಲು.
ಅಪಸ್ವರವು ತುಟಿಗಳಿಗೆ ಎಲ್ಲಿಂದ ಬಂದಾತು?
ಎಂದೆನುತ ಕೆನ್ನೆಗೆ ನೀಡಿದೆ ನೀ ಸಿಹಿಮುತ್ತು..!
ಚುರ್ರ್ ಎಂಬ ಅನುಭೂತಿ ಉರಿಯೊಡನೆ ಆಗಿರಲು,
ನಿದ್ದೆಯಿಂದೆದ್ದು ಕಣ್ ತೆರೆದು ನೋಡಲು,
ಇದ್ದದ್ದು ಅಲ್ಲಿ ನೀನಲ್ಲ ನಲ್ಲೆ,
ರಕ್ತ ಪಿಪಾಸು ಧಡೂತಿ ಸೊಳ್ಳೆ..!!
No comments:
Post a Comment