ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Friday, December 14, 2012

ಅರ್ಧನಾರಿ.!!?


modern  ಬಟ್ಟೆ ಹಾಕಿರೊ ಚಿಟ್ಟೆ 
ಬಂದಳು ನೋಡಲ್ಲಿ;
ನನ್ನಯ Heartali ಪ್ರೀತಿಯ ಕಟ್ಟೆ 
ಒಡೆಯಿತು ಯಾಕಿಲ್ಲಿ..
line-u  ಹಾಕುತ ಹೊಡೆದೆನು ಲೊಟ್ಟೆ
ತಿರುಗಿ ನೋಡಿದಳು;
ಅವಳಿಗೆ ಮನಸನು ಕೊಟ್ಟೇಬಿಟ್ಟೆ 
ನಗುತಲಿ ಸಾಗಿದಳು..
Next-u day ನೇ giftanu ಕೊಟ್ಟೆ 
ಸನ್ನೆ ಮಾಡಿದಳು;
ಅಯ್ಯೋ "ಮಾಮಾ" ಏನು ಬೇಕು 
ಎನ್ನುತ ಕೇಳಿದಳು (!?)
'ಅರ್ಧ ನಾರಿ' ಯು ಎಂಬುದ ತಿಳಿದು
ಬಿಟ್ಟು ಓಡಿದೆನು!
'ಮಾಮಾ ಓಡ್ತವ್ನ್ ನೋಡ್ರೆ' ಅಂತ 
ಗುಂಪನೆ ಕೂಗಿದಳು(!?)
ಬೇಡಪ್ಪ ಚಿಟ್ಟೆ, ಸಿಕ್ಕರೆ ಕೆಟ್ಟೆ,
ಎನ್ನುತ ಓಡಿದೆನು...
ಮನೆ ಕಡೆ, ಬಿಡದಲೇ ಓಡಿದೆನು... :):)

ನಲ್ಲೆ..


ನಲ್ಲೆ,
ಚೌಕಾಶಿಯೇ ಇಲ್ಲದೆ ಮಾಡಿದೆ ನೀ
ನನ್ನ ಹೃದಯದ ಖರೀದಿ;
ಕೊಂಡುದಕೆ ಖಾತರಿಯಾಗಿ ನೀಡಲೆ
ನಾ ಮುತ್ತಿನ ರಸೀದಿ..!!?

ಅಷ್ಟ್ ಸಾಕು ನಂಗೆ..!!!


ಒಮ್ಮೆ ತಿರುಗಿ ನೋಡು ನೀನು,
ನೋಡಿ ಒಂದ್ಸರಿ ನಕ್ಬಿಡ್ ನೀನು;
ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
ಮಲ್ಲೆ ಹೂವ ಘಮದಲ್ ಬಂದು,
ನನ್ನುಸಿರ್ ಅದ್ರಲ್ ಬೆರಸು ನೀನು,
ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
ಮೈ ಮರತು ನನ್ ಹೆಸ್ರುನ್ ಕೂಗು,
ಅರಿವಿಗ್ ಬಂದ್ಮೇಲ್ ನಾಚಿಕೇಲ್ ಬೀಗು;
ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
ಯಾವ್ದುಕ್ಕು ಇರಲಿ ನೆಂಪಿಗಂತ,
ಮುತ್ತನೊಂದು ಕೊಟ್ಟಿರ್ ನೀನು;
ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
                          ಅಷ್ಟೇ ಸಾಕು ನಂಗೆ..!!!

ಸ್ವಾರ್ಥದ ಕತ್ತಲು...!

ಕಣ್ಣನರಳಿಸಲು ಎಲ್ಲೆಡೆ ಕತ್ತಲು,
ಅಂಧಕಾರವೇ ರಾಚಿದೆ ಎತ್ತಲೂ,
ಕತ್ತಲ ಬೆತ್ತಲು ಆಗುತ ಸುತ್ತಲು,
ಬೆಳಕ ಬಟ್ಟೆಯನು ಕಳಚಿಹುದು..
ಸ್ವಾರ್ಥದ ರಚ್ಚು ಮೈಯನು ಮೆತ್ತಲು,
ಸಾಮರಸ್ಯದ ಬಾಳ್ವೆಯ ಕಿತ್ತಲು,
ಬಾಳ ನೆಲದಲ್ಲಿ ದ್ವೇಷ ಬಿತ್ತಲು,
ಮಾನವತ್ವ ತುಂಡಾಗಿಹುದು...
        ಅಭದ್ರ ಬಾಳದು ಬೆಳಗಿಹುದು..!!!