ಮನಸಿನ ಭಾವನೆ ನೀನೇ,
ಭಾವನೆಗೆ ಪ್ರೇರಣೆ ನೀನೇ.
ಬದುಕು ಕತ್ತಲಲಿ ನಡೆದಿರೆ,
ಬೆಳಕ ಬೀರೋ ಕಿರಣ ನೀನೇ.
ಎನ್ನೆದೆಯ ಉಸಿರು ನೀನೇ,
ಅದರಲಿಯ ಹಸಿರು ನೀನೇ.
ಏರಿಳಿತದಿ ಹೃದಯ ಬಡಿದಿರೆ,
ಅದು ಗುನುಗೊ ಹೆಸರು ನೀನೇ.
ಪ್ರೀತಿ, ಒಲವಿನ ಬಂಧ ನೀನೇ,
ಎನ್ನ ಒಲುಮೆಯೊಳು ಚಂದ ನೀನೇ.
ಸನಿಹ ಬಯಸುತ ಹೃದಯ ಕರೆದಿರೆ,
ಮನವ ಬೆಳಗೊ ಜ್ಯೋತಿರ್ಬಿಂದು ನೀನೇ.
ಎನ್ನ ತನುವಿನ ಜೀವ ನೀನೇ,
ಮನದ ಪ್ರಾಣ, ಭಾವ ನೀನೇ.
ಎನ್ನ ಜೀವನಕರ್ಥ ಕೇಳಿರೆ,
ದೈವ ಕಳಿಸಿದ ಸತ್ವ ನೀನೇ.
No comments:
Post a Comment