ಕೇಸರೀನಂದನ ಚಂದನಲಂಕೃತ
ತುಳಸೀಧಾರಣ ಓ ಹನುಮ;
ನಿಜಗುಣ ಪಾಲಕ, ಶಕ್ತಿ ಪ್ರದಾಯಕ
ಧೈರ್ಯದ ಧಾತು ಓ ಹನುಮ..
ರಾಮನ ಚರಣವ ನಿಜದಲಿ ಸೋಕಿದ
ಪುಣ್ಯದ ಜೀವ ನೀ ಹನುಮ;
ನಿನ್ನನು ಭಜಿಸಲು ರಾಮನೂ ಒಲಿಯುವ
ಧನ್ಯತಾಭಾವ ಓ ಹನುಮ..
ಕಷ್ಟವ ಸುಲಲಿತ ನೀಗಿಸೆ ಸೂಚಿಸಿ
ಪರ್ವತವೆತ್ತಿದೆ ಓ ಹನುಮ;
ಭೋರ್ಗರೆವ ಸಂತಾಪದ ಕಡಲನು
ದಾಟಿಸಿ ನಡೆಸುವೆ ನೀ ಹನುಮ..
ವಾಯು ವಿಹಾರನೆ, ಭಕುತಿಗೆ ಪ್ರೇರಣೆ
ರಾಮನ ಭಂಟನೆ ಓ ಹನುಮ;
ತೇಜೋವರ್ಯನೆ, ಸರ್ವತಾ ಪೂಜ್ಯನೆ
ಇಷ್ಟ ದೈವವೇ ನೀ ಹನುಮ..
ತುಳಸೀಧಾರಣ ಓ ಹನುಮ;
ನಿಜಗುಣ ಪಾಲಕ, ಶಕ್ತಿ ಪ್ರದಾಯಕ
ಧೈರ್ಯದ ಧಾತು ಓ ಹನುಮ..
ರಾಮನ ಚರಣವ ನಿಜದಲಿ ಸೋಕಿದ
ಪುಣ್ಯದ ಜೀವ ನೀ ಹನುಮ;
ನಿನ್ನನು ಭಜಿಸಲು ರಾಮನೂ ಒಲಿಯುವ
ಧನ್ಯತಾಭಾವ ಓ ಹನುಮ..
ಕಷ್ಟವ ಸುಲಲಿತ ನೀಗಿಸೆ ಸೂಚಿಸಿ
ಪರ್ವತವೆತ್ತಿದೆ ಓ ಹನುಮ;
ಭೋರ್ಗರೆವ ಸಂತಾಪದ ಕಡಲನು
ದಾಟಿಸಿ ನಡೆಸುವೆ ನೀ ಹನುಮ..
ವಾಯು ವಿಹಾರನೆ, ಭಕುತಿಗೆ ಪ್ರೇರಣೆ
ರಾಮನ ಭಂಟನೆ ಓ ಹನುಮ;
ತೇಜೋವರ್ಯನೆ, ಸರ್ವತಾ ಪೂಜ್ಯನೆ
ಇಷ್ಟ ದೈವವೇ ನೀ ಹನುಮ..