ನೀ ನನ್ನ ಕಾಡಿದ್ದು, ಕಾಡುತಲಿ ಕರೆದಿದ್ದು,
ಈ ನಿನ್ನ ಕಣ್ಣಿಂದಲೇ...
ನನ್ನೊಳಗೆ ನಡೆದಿದ್ದು, ನಡೆಯುತಲಿ ಮಿನುಗಿದ್ದು,
ಕಣ್ಣಂಚ ಮೆರುಪಿಂದಲೇ...
ರೇಶಿಮೆಯು ಸೊರಗಿದ್ದು, ಸೊರಗುತಲಿ ಮರುಗಿದ್ದು,
ನಿನ್ ಕೇಶ ಕಂಡಾಗಲೇ...
ಬಳ್ಳಿಯದು ಸೆಟೆದದ್ದು, ಬಿಂಕವನು ನಿಲಿಸಿದ್ದು,
ನಿನ್ ನಡಿಗೆ ಬಳುಕಿಂದಲೇ...
ಸುತ್ತುವಾ ಗಾಳಿಯದು, ಚಲಿಸುವುದ ಮರೆತಿದ್ದು,
ನಿನ್ನುಸಿರ ಸೊಂಪಿಂದಲೇ...
ಕೋಗಿಲೆಯು ಕಾದಿದ್ದು, ಹಾಡುವುದ ನಿಲಿಸಿದ್ದು,
ನಿನ್ ದನಿಯ ಇಂಪಿಂದಲೇ..
ನನ್ನೆದೆ ಬಡಿತವದು, ನಿನ್ಹೆಸರ ಗುನುಗಿಹುದು
ನಿನ್ನಯಾ ಒಲವಿಂದಲೇ...
ನೀ ಸನಿಹ ಇದ್ದರದು, ಗೆಲುವು ನಂದೆನಿಸಿಹುದು
ನಿನ್ ಪ್ರೀತಿ ಬಲದಿಂದಲೇ...ನಲ್ಲೆ ನಿನ್ ಪ್ರೀತಿ ಬಲದಿಂದಲೇ....
No comments:
Post a Comment