ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Friday, February 14, 2020

ಸರಪಳಿಯ ಬಂಧನ..


ಸರಪಳಿಯ ಕೊಂಡಿಯದೋ - ಸಾವಿರದ ಸರಸ;
ಒಂದು ತುದಿ ನೀನು, ಮತ್ತೊಂದು ನಾನು..

ಪ್ರತಿ ಕೊಕ್ಕೆ ನಮ್ ತೆಕ್ಕೆ ಮೂದಲಿಸೊ ರೀತಿ.
ಆದರೆ ಏನಂತೆ? ಮಿಗಿಲೆಮ್ಮ ಪ್ರೀತಿ..

ನಮ್ ಬಾಹು ಬಂಧನಕೆ ಪೈಪೋಟಿ ತಾನೆಂದು,
ಉಕ್ಕು ತಾನುಬ್ಬಿತ್ತು, ಮದವಳಿಯಿತಿಂದು..

ಸರಪಳಿಯ ಚಲನವದು ಅಡಿಗಡಿಯೂ ಜೊತೆಗೆ,
ಪ್ರತಿ ನಡಿಗೆ ನಮ್ಮದದು ನಮ್ಮಾತ್ಮದೆಡೆಗೆ..