ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Sunday, May 29, 2011

ಉತ್ತರದ ನಿರೀಕ್ಷೆ..!


ಮನದಿ ಪ್ರೇಮ ರಾಗವು ಗುನುಗುತಿದೆ
ನೀನದನು ಆಲಿಸೆಯ?
ನಿನ್ನೆಡೆಗಿನ ಒಲವು ಮೊಳಕೆಯೊಡೆದಿದೆ
ನೀನದನು ಪೋಷಿಸೆಯಾ?
          ಸನಿಹ ಬಯಸುತ ಬಂದ ಮನದಿಂದ
          ನೀ ದೂರ ಸರಿಯುವೆಯಾ?
          ಎನ್ನ ದೇಹದ ಉಸಿರು ನೀನು
          ಅಗಲಿಕೆಯ ಬಯಸುವೆಯಾ?
ದೇಹದ ಖನಿಜದಲಿ ನೀನಿರುವೆ
ನೀನದನು ತುಂಡರಿಸುವೆಯಾ?
ಹೃದಯ ಮಿಡಿತಗಳು ಒಂದೇ ಆಗಿವೆ
ಅದ ನೀನು ಗಮನಿಸೆಯಾ?
           ಇದಕೆಲ್ಲ ಉತ್ತರವೆಂಬಂತೆ
           ನೀ ನನ್ನ ಪ್ರೀತಿಸೆಯಾ?
           ಪ್ರೀತಿಸಿ, ಎನ್ನ ಭಾವನೆಗೆ
           ಜೀವವನು ನೀಡೆಯಾ?

No comments:

Post a Comment