ನಾನೆಂಬ ಅಣುವಿಗದು(ಮನುಷ್ಯ) ನಾವೆಂಬುದಿಲ್ಲ,
ಸರ್ವಹಿತ ಬಾಳ್ವೆಯದು ಕಾಣದಿದೆಯಲ್ಲ!
ಪರಿಸರಕೆ ಕಾಣ್ಕೆಯ ಪೋಷಾಕು ಧರಿಸಿ
ಬೆನ್ನಲ್ಲಿ ಚೂರಿ, ನೆತ್ತರನು ಹರಿಸಿ;
ತೊಯ್ದಿರುವ ಪಾಪದ ಹೊಳೆಯಲ್ಲಿ ನಾವೆ,
ಮುಳುಗದಲೆ ಕಾಪಿಡಲು ಸನ್ಮತಿಯ ದಾವೆ;
ತೀರ್ಪಿನಾ ಮರ್ಜಿಗೆ ಪ್ರಕೃತಿ ಅಹವಾಲು,
ದೊರೆತಾಗ ಭಗವಂತನಾ ದಾಪುಗಾಲು;
ಸಮತತ್ತ್ವ ಸಾಧಿಸಲು ದೈವ ಬಗೆದಾಗ
ಅಣುವಿಗೆ ಅಣುವೇ ಸೈ ಪೈಪೋಟಿ ಈಗ..
ಸರ್ವಹಿತ ಬಾಳ್ವೆಯದು ಕಾಣದಿದೆಯಲ್ಲ!
ಪರಿಸರಕೆ ಕಾಣ್ಕೆಯ ಪೋಷಾಕು ಧರಿಸಿ
ಬೆನ್ನಲ್ಲಿ ಚೂರಿ, ನೆತ್ತರನು ಹರಿಸಿ;
ತೊಯ್ದಿರುವ ಪಾಪದ ಹೊಳೆಯಲ್ಲಿ ನಾವೆ,
ಮುಳುಗದಲೆ ಕಾಪಿಡಲು ಸನ್ಮತಿಯ ದಾವೆ;
ತೀರ್ಪಿನಾ ಮರ್ಜಿಗೆ ಪ್ರಕೃತಿ ಅಹವಾಲು,
ದೊರೆತಾಗ ಭಗವಂತನಾ ದಾಪುಗಾಲು;
ಸಮತತ್ತ್ವ ಸಾಧಿಸಲು ದೈವ ಬಗೆದಾಗ
ಅಣುವಿಗೆ ಅಣುವೇ ಸೈ ಪೈಪೋಟಿ ಈಗ..