ಒಲವಿಲ್ಲದ ಪ್ರೀತಿ ಪ್ರೀತಿಯಲ್ಲ.
ಸ್ವಾರ್ಥದ ಪ್ರೀತಿ ಪ್ರೀತಿಯಲ್ಲ.
ಒಳ ಅರಿವಿಲ್ಲದ ಪ್ರೀತಿ ಹರಿಸಿ,
ಸುರಿಸಿದರೂ ಅದು ಪ್ರೀತಿಯಲ್ಲ.
ಬಲವಂತದ ಪ್ರೀತಿ ಪ್ರೀತಿಯಲ್ಲ.
ಸ್ವತಂತ್ರ ಸೆಲೆಯಿರದ ಪ್ರೀತಿ ಪ್ರೀತಿಯಲ್ಲ.
ಭಾವನೆಗೆ ನೆಲೆಯಿರದ ಪ್ರೀತಿ ತೋರಿ,
ಹರಿಹಾಯ್ದರೂ ಅದು ಪ್ರೀತಿಯಲ್ಲ.
ವಾಸ್ತವದರಿವಿರದ ಪ್ರೀತಿ ಪ್ರೀತಿಯಲ್ಲ.
ಬಹಿರಂಗಕೆ ತೋರ್ಪ ಪ್ರೀತಿ ಪ್ರೀತಿಯಲ್ಲ.
ಮನಸಿಗೆ ಘಾಸಿಯಾಗುವ ಪ್ರೀತಿ ಬೆಸೆದು,
ಎಸೆದರೂ ಅದು ಪ್ರೀತಿಯಲ್ಲ.
ಪ್ರೀತಿಯು ಸಿಗದಿದ್ದರೂ, ಪಡೆಯಲಾಗದಿದ್ದರೂ,
ಪ್ರೀತಿಯ ಅಮರತೆಯನು, ಪ್ರೇಮಿಯ
ಸಂತಸವನು ಬಯಸದೆ,
ಕರಿನೆರಳಂತೆ ಕಾಡುವ ಪ್ರೀತಿ ಪ್ರೀತಿಯಲ್ಲ...
No comments:
Post a Comment