ಊರಿಗೇ ನೆರಳಾ ಕೊಡುವಂಥ ಮರಕೆ
ಬಿರುಗಾಳಿ ಬಂದು ರಪ್ಪೆಂದು ಬಡಿದಾಗ -
ಉರುಳುವಾ ಜಾಗ ಸಿಗದಾಗಿದೆ.!
ಸಂತಾಪ ತೋರಿ ಸಂತೈಸೊ ಕೈಗೆ
ಮೊನಚಾದ ಮುಳ್ಳು ತಾನೊಂದು ಇರಿದಾಗ -
ನೇವರಿಸೊ ಕೈಯೊಂದು ಇರದಾಗಿದೆ.!
ಊರಿಗೇ ನೆರಳಾ ಕೊಡುವಂಥ ಮರಕೆ
ಬಿರುಗಾಳಿ ಬಂದು ರಪ್ಪೆಂದು ಬಡಿದಾಗ -
ಉರುಳುವಾ ಜಾಗ ಸಿಗದಾಗಿದೆ.!
ಸಂತಾಪ ತೋರಿ ಸಂತೈಸೊ ಕೈಗೆ
ಮೊನಚಾದ ಮುಳ್ಳು ತಾನೊಂದು ಇರಿದಾಗ -
ನೇವರಿಸೊ ಕೈಯೊಂದು ಇರದಾಗಿದೆ.!
ಇಣುಕಿ-ಇಣುಕಿಣುಕಿ,
ಬೇಲಿ ದಾಟಿದ ಕೆಣಕಿ;
ನಾಚಿ ಕೆಂಪಾದ ಆಕೀನ ಕಂಡು -
ನುಡಿದ 'ನೀ ಚಂದ್ರಮುಖಿ'..
ಗಾಳಿಯು ಚಾಮರ ಬೀಸಿ,
ಅಂತರಕುಂಟೇ ಜಾಗ?
ಬಾಚಿ ತಬ್ಬಲೋಲಗದ ಸದ್ದು -
ಶುರುವು ಒಲವಿನಾ ರಾಗ.