ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, April 27, 2020

ನಯನದ ಸರಸ..!

ಬಾಂಧವ್ಯ ಬೆಸೆಯಲು ಮಿಲನದಿ
ಮನವು ಬಯಸಿದೆ ತುಡಿತದಿ;
ಏಕೋ ತಿಳಿಯದು ನಿನ್ನ ನಯನವು
ಕರೆಯಿತೆನಿಸಿತು ಬಳಿಗೆ ಸರಸದಿ...

ನಿದ್ದೇಲೂ ಭಯ..!!

ನಿದ್ದೆಗೆಟ್ಟೆನೆ ಪ್ರಿಯೆ
ರಾತ್ರಿಯಿಡೀ ನಿನ್ನ
ನೆನೆಯುತ…
ಕತ್ತಲಲಿ ನಿನ್ನ ಮುಖವ
ನೋಡಿದ ಭಯದಿಂದ
ನಡುಗುತ.!

ಬೇಕು..ಬೇಡ..!

ಬೇಕಾಗಿರುವುದು ಸಿಗದೆ
ಬೇಡದಿರುವುದು ಸಿಗುವ
ಈ ಜೀವನವೇ ದಂಡ!
ಅದಕೆ ಸಿಗುವುದು
ಗಂಡನಿಗೆ ಹೆಂಡತಿ
ಹೆಂಡತಿಗೆ ಗಂಡ..!

ಸನಿಹಕಾಗಿ ಬಿನ್ನಹ

ಹೂವೊಂದು ನಾಚಿತು

ನಿನ್ನ ಚೆಲುವ ನೋಡಿ,

ಕೋಗಿಲೆಯು ಮರುಗಿತು

ನಿನ್ನ ದನಿಯ ಕೇಳಿ.

       ಮಿಂಚಂತೂ ಮಲಗಿತು

ನಿನ್ನ ನಯನ ನೋಡಿ,

ಬಳ್ಳಿಯಂತು ಒಣಗಿತು

ನಿನ್ನ ನಡುವ ನೋಡಿ.

ಜೋಗದ ಸಿರಿ ಕುಗ್ಗಿತು

ನಿನ್ನ ನುಣುಪ ನೋಡಿ,

ನವಿಲೊಂದು ಅಲೆಯಿತು

ನೀನು ನಡೆಯೆಂದು ಕಾಡಿ.

ನಾನಂತೂ ಬಂದೆನು

ನಿನ್ನ ಒಲವ ಅರಸಿ,

ಹಾತೊರೆದು ನಿಂತೆನು

ನಿನ್ನ ಸನಿಹ ಬಯಸಿ..

ಯಜಮಾನ್ರ ಗುಣಗಾನ!

ಆಕೆ ಹೇಳಲು -
"ನಮ್ಮೆಜಮಾನ್ರು ನಾಯಿಯಂತೆ 
ಮನೆ ಕಾಯ್ತಾರೆ"
ಈಕೆ ಪಂದ್ಯಕ್ಕೆ ಬಿದ್ದು ಬೀಗಿದಳು -
"ನಮ್ಮವರು ಕತ್ತೆಯಂತೆ 
ಮನೆಗೆಲಸವನ್ನೆಲ್ಲಾ ಮಾಡ್ತಾರೆ"!!

ಏನೆಂದು ಬಣ್ಣಿಸಲಿ ಪ್ರಿಯೆ ನಿನ್ನ?

ಮುದ್ದು ಕೋಮಲದ ಹೂವೆಂದು ಬಣ್ಣಿಸಲೆ?
              ಮಬ್ಬಾದೊಡನೆ ಕೋಮಲತೆಯು ಮಾಸುವುದಲ್ಲೆ!
ಹೊಳೆಯುವ ಉಷೆಯೆಂದು ಬಣ್ಣಿಸಲೆ?
ಮೋಡದ ಮರೆಗದರ ಕಾಂತಿ ಕುಗ್ಗುವುದಲ್ಲೆ!
ಬೆಳದಿಂಗಳ ಚಂದ್ರನೆಂದು ಬಣ್ಣಿಸಲೆ?
ಗ್ರಹಣದ ಗ್ರಹಚಾರವು ಅದನೂ ಕಾಡುವುದಲ್ಲೆ!
ಸಹ್ಯಾದ್ರಿಯ ಸೊಬಗೆಂದು ಬಣ್ಣಿಸಲೆ?
ಮಾನವನ ಚಪಲಕ್ಕೆ ಕೊಲೆಯಾಗುತಿಹುದಲ್ಲೆ!
ಜಲರಾಶಿಯ ಬಳುಕೆಂದು ಬಣ್ಣಿಸಲೆ?
ಕಲುಷಿತದಿಂದ ಆವೃತವಾಗಿದೆಯಲ್ಲೆ!
ಏನೆಂದು ಬಣ್ಣಿಸಲಿ ಪ್ರಿಯೆ ನಿನ್ನ?
ನಿನ್ನ ಸೌಂದರ್ಯದ ಆರಾಧಕನನ್ನಾಗಿ ಸ್ವೀಕರಿಸು ನನ್ನ.. 

Saturday, April 18, 2020

I...We..!!

ನಾನು-ನಂದೆಂದು
ಅಹಂನಲ್ಲಿ ಮಿಂದೇಳುವುದೇ - 'I'llness;
ನಾವು-ನಮ್ದೆಂದು
ಸಹಬಾಳ್ವೆ ಎಂದೇಳುವುದೇ - 'We'llness..

ಕೊರೋನ effect..

ನಲ್ಲೆಗೆ ಥಟ್ಟಂತ ನೆನಪಾಯ್ತು,
'ಹೋಗಿದ್ನಲ್ಲ  ನಲ್ಲ ಆಚೆ
ತರೋಕೆ ಕೊತ್ತಂಬ್ರಿ..'!

ದೂರ ಸರಿದು ಕೇಳಿದ್ಲು;
"ಸ್ಯಾನಿಟೈಸ್ ಮಾಡ್ಕೊಂಡ್ಯೊ ಇಲ್ವೋ?
ನಂಗಂತು ಈಗ ಫುಲ್ ವರಿ.."

ಬಾಹು ಬಂಧನ..!!

ಉತ್ತೇಜನದಿ ಆದದ್ದೇನೊ ನಿಜ,
ನನ್ನ-ನಿನ್ನ ಬಾಹು ಬಂಧನ;
ಉನ್ಮಾದದಿ ಚಂದ್ರನ ಗುರುತು ಮೂಡಿ -
ತಿಳಿಯಿತು, ಬಾವು ಕೂಡ ನಂದನ..!

ಸಲ್ಲದು ತಗಾದೆ...



ಕೆಂಪಡರಿದ ಬಾನಲ್ಲಿ ನಸುಕಿನಾ ಗುರುತು,
ಚಿಗುರಿನ ತಾವೆಲ್ಲಿ ಬೇಸರದ ಹೊರತು!?
ಒಣಗಿದಾ ಎಲೆಗಳವು ಸುಳಿಗಾಳಿಗಂಜಿ,
ಮರ ತೊರೆಯೊ ವಿರಹದಲಿ ಕಳೆದಿದೆ ಸಂಜಿ.
ಮರಣವದು ಮರುಹುಟ್ಟಿಗಂತೆ ಇರಾದೆ,
ಜತನದಲಿ ಬದುಕಿರಲಿ ಸಲ್ಲದು ತಗಾದೆ..

ರಸಿಕತೆ..!!

ಸಣ್ಣಗಿನ ನಡುವಿಗೆ ರಸಿಕನೆಂದನು-
'ನಾ ಬಲ್ಲೆ, ನಿನ್ನ ಸೊಂಟ ಇದ್ದಂತೆ ಬಳುಕೋ ಲತೆ'
ಸ್ವಲ್ಪ ದಪ್ಪಾದೊಡನೆ ರಸಗುಂದದೆ ಅವನೆಂದನು-
'ಓ ನಲ್ಲೆ, ನನ್ನ ತೋಳಲ್ಲೇ ಅಳೆಯುವೆ ಸುತ್ತಳತೆ'..