ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Tuesday, May 24, 2011

ಅಂತರ್ಗತ..!!

ಕೆಚ್ಚಲಲಿ ಹಾಲುಂಡು ಹಸಿವ ನೀಗಿಸುತಿರಲು,
ಕರುವ ಎಳೆದು ಹಾಕಿದ ಹಾಗೆ!
          ಬಸಿರಿಗೆ ಉಸಿರಾಗಿ ತಾ ಕೂಸ ಮಾಡಿ,
          ಹಸಿವಿಗೆ ಬಳಲಿ, ಸಿಂಗ, ತಾನುಂಡ ಹಾಗೆ!
ಪ್ರೇಮ ಭಾವದ ಜೀವದೊಡನಾಡಿಯಾಗಿ,
ಕ್ರೂರ ಜಗಕೆದರಿ ವಿಷವನೀಯುವ ಹಾಗೆ!
           ಮಾಡಿದರೂ ಒಲ್ಲೆ ಎನ್ನೆ ಪ್ರಿಯೆ;
           ಚರವದುವೆ ದೂರವಾಗಿಹುದು,
           ಇರುವೆ ನಿನ್ನಲೇ ಪಂಚಭೂತಗಳ ಹಾಗೆ!!

No comments:

Post a Comment