ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Tuesday, March 15, 2016

ಧನ್ಯವಲ್ಲವೆ..!?

ಕೈ ಹಿಡಿದು ನಡೆದು ಸಾಗಿ,
ಭುಜಕೆ ಭುಜವು ಇರಲು ತಾಗಿ,
ನೀನೇ ನನ್ನ ಲೋಕವಾಗಿ-
ಜೊತೆಗೆ ಅಲೆವ ಕ್ಷಣವದುವೆ ಧನ್ಯವಲ್ಲವೆ..?
       ಹೆಜ್ಜೆ ಜೊತೆಗೆ ಹೆಜ್ಜೆ ಬೆರೆತು,
       ನಿನ್ನ ಹೊರತು ಎಲ್ಲ ಮರೆತು,
       ನೀನೇ ನನ್ನ ಬಾಳ ಗುರುತು-
       ಅನಿಸಿ ಅಲೆವ ಕ್ಷಣವದುವೆ ಧನ್ಯವಲ್ಲವೆ..?
ಬಿಡುವು ಕೊಡದ ಮಾತು ಇರಲು,
ಕಣ್ಣ ನೋಟ ಬೆಸೆದುಕೊಳಲು,
ಭಾವತಂತು ಮೀಟುತಿರಲು-
ಅಪ್ಪಿ ಅಲೆವ ಕ್ಷಣವದುವೆ ಧನ್ಯವಲ್ಲವೆ..?
       ತುಂಟ ಮಾತನೆಲ್ಲ ದೋಚಿ,
       ನೀನು ಒಮ್ಮೆ ಕೊಂಚ ನಾಚಿ,
       ನನ್ನ ತೋಳ ಬಿಗಿದು ಬಾಚಿ-
       ತಲೆಯನಿರಿಸಿ ಅಲೆವ ಕ್ಷಣವು ಧನ್ಯವಲ್ಲವೆ..?

1 comment:

  1. ನನ್ನ ತನವ ಬಿಟ್ಟುಕೊಟ್ಟು,
    ನನ್ನ ಆಸೆ ನಿನ್ನಲಿಟ್ಟು,
    ನಿನ್ನ ಉಸಿರೇ ನನ್ನದಾಗಿ,
    ಆ ಉಸಿರಲಿ ಬದುಕುತಿರುವ ಈ ಜೀವ ಧನ್ಯವಲ್ಲದೆ?

    ReplyDelete