ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, June 6, 2016

ನಾ ಸ್ನೇಹಿತ..

ಸಂಜೆ ರಾಗಕೆ ಸಹಗೀತದಂತೆ
ನನ್ನ ನಿನ್ನ ಸಹಚಾರವು;
ತಂಪು ಚಾರಣವೂ ಮತ್ತೇರುವಂತೆ
ಒಲವೇ ನಿನ್ನ ಸಹವಾಸವು..

ಸೋಜಿಗವೆನಿಸುವ ಆಪ್ತತೆ ನಿಂದು
ನಾನೇ ನೀನೆನ್ನುವಂಥ ಭಾವ;
ನಾ ಬೇರೆ ನೀ ಬೇರೆ ಅಲ್ಲವೆಂದು
ಮೇಳೈಸಿದಂತಿಹುದು ನಮ್ಮ ಜೀವ..

ದುಂಬಾಲು ಬಿದ್ದಾಗ ನನ್ನ ಕೋಪ
ಶಾಂತತೆ ಕಾಪಾಡೊ ಸಹನೆ ನೀನು;
ಕಂಗಾಲು ಆಗದ ರೀತಿಯಲ್ಲಿ
ಸಂಭಾಳಿಸಿ ನಡೆಸೊ ನಿಂಗೆ ಶರಣು..

ಎಲ್ಲ ನಿನ್ನದೇ ಪರಿಣಾಮ ನೋಡು
ಆದೆ ನಾನಂತು ತುಸು ಮೋಹಿತ;
ಆಣೆ ಮಾಡುತ್ತ ಸಂಗಾತ ಸಾಗುವೆ
ಬಾಳ್ವೆ ಯಾನದಲಿ ನಾ ಸ್ನೇಹಿತ..

No comments:

Post a Comment