[Note: ಕವನಕ್ಕೆ plot ಸ್ನೇಹಿತ ಪ್ರದೀಪ್ ಹೇಳಿದ ಒಂದು ಮಾತು :) ]
----------------------------------------------------------------------------
ಜೊತೆಯಲಿ ನಡೆಯುತ ಸೋಕಲು ಕೈಗಳು,
ಕಂಪಿಸಿ ಬೆಸೆದವು ಹುರುಪಿನಲಿ;
ಮೆಲ್ಲಗೆ ನಲ್ಲನ ಬೆರಳದು ನಲ್ಲೆಗೆ,
ಪ್ರೀತಿಯ ನೇಯ್ಗೆಯ ಕಲಿಸುತಲಿ..
ಭಾವಕೆ ಭಾವವ ಪೋಣಿಸಿ ಹೆಣೆಯುತ
ನಡೆದಿರೆ ಇಬ್ಬರೂ ಜೊತೆಯಲ್ಲಿ;
ಹೊಸ ಬಗೆ ಚೇತನ ಉದಯಿಸಿ ಸರಸದಿ
ಕೀಟಲೆ ನಗುವನು ಬೀರುತಲಿ..
ನಿರ್ಮಲ ಶಾಂತತೆ ಎಲ್ಲಿದೆ ಇನ್ನು!?
ಮನದಲಿ ಸಾವಿರ ಯೋಚನೆಯು;
ಅಪ್ಪುಗೆ ಮತ್ತು ಮುತ್ತಿನ ಸರಪಳಿ
ಹಾಕುವ ಸಂಚಿನ ಯೋಜನೆಯು.!
ಬೆಸೆದಿರೊ ಬೆರಳನು ಬಿಗಿಯುತ ಒಮ್ಮೆಲೆ
ಪಡೆದ ಅಪ್ಪುಗೆಗೆ ಸಡಿಲಿಲ್ಲ;
ತುಟಿಗಳು ಎರಡೂ ಜಡಿದವು ಬೀಗವ,
ಕೀಲಿ ಹುಡುಕಲು ಮನಸಿಲ್ಲ!!
----------------------------------------------------------------------------
ಜೊತೆಯಲಿ ನಡೆಯುತ ಸೋಕಲು ಕೈಗಳು,
ಕಂಪಿಸಿ ಬೆಸೆದವು ಹುರುಪಿನಲಿ;
ಮೆಲ್ಲಗೆ ನಲ್ಲನ ಬೆರಳದು ನಲ್ಲೆಗೆ,
ಪ್ರೀತಿಯ ನೇಯ್ಗೆಯ ಕಲಿಸುತಲಿ..
ಭಾವಕೆ ಭಾವವ ಪೋಣಿಸಿ ಹೆಣೆಯುತ
ನಡೆದಿರೆ ಇಬ್ಬರೂ ಜೊತೆಯಲ್ಲಿ;
ಹೊಸ ಬಗೆ ಚೇತನ ಉದಯಿಸಿ ಸರಸದಿ
ಕೀಟಲೆ ನಗುವನು ಬೀರುತಲಿ..
ನಿರ್ಮಲ ಶಾಂತತೆ ಎಲ್ಲಿದೆ ಇನ್ನು!?
ಮನದಲಿ ಸಾವಿರ ಯೋಚನೆಯು;
ಅಪ್ಪುಗೆ ಮತ್ತು ಮುತ್ತಿನ ಸರಪಳಿ
ಹಾಕುವ ಸಂಚಿನ ಯೋಜನೆಯು.!
ಬೆಸೆದಿರೊ ಬೆರಳನು ಬಿಗಿಯುತ ಒಮ್ಮೆಲೆ
ಪಡೆದ ಅಪ್ಪುಗೆಗೆ ಸಡಿಲಿಲ್ಲ;
ತುಟಿಗಳು ಎರಡೂ ಜಡಿದವು ಬೀಗವ,
ಕೀಲಿ ಹುಡುಕಲು ಮನಸಿಲ್ಲ!!
No comments:
Post a Comment