ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Friday, December 14, 2012

ಸ್ವಾರ್ಥದ ಕತ್ತಲು...!

ಕಣ್ಣನರಳಿಸಲು ಎಲ್ಲೆಡೆ ಕತ್ತಲು,
ಅಂಧಕಾರವೇ ರಾಚಿದೆ ಎತ್ತಲೂ,
ಕತ್ತಲ ಬೆತ್ತಲು ಆಗುತ ಸುತ್ತಲು,
ಬೆಳಕ ಬಟ್ಟೆಯನು ಕಳಚಿಹುದು..
ಸ್ವಾರ್ಥದ ರಚ್ಚು ಮೈಯನು ಮೆತ್ತಲು,
ಸಾಮರಸ್ಯದ ಬಾಳ್ವೆಯ ಕಿತ್ತಲು,
ಬಾಳ ನೆಲದಲ್ಲಿ ದ್ವೇಷ ಬಿತ್ತಲು,
ಮಾನವತ್ವ ತುಂಡಾಗಿಹುದು...
        ಅಭದ್ರ ಬಾಳದು ಬೆಳಗಿಹುದು..!!!

No comments:

Post a Comment