ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Saturday, January 14, 2012

ಲವ್ ಸ್ಟೋರಿ @ ಇನ್ಫೋಸಿಸ್.....!!!


ಲವ್ ಸ್ಟೋರಿ @ ಇನ್ಫೋಸಿಸ್.....!!!

ಬೆಳಗಿನಿಂದ ಕೆಲ್ಸ ಮಾಡಿ ಒಂದು ತೆರನಾದ ಸುಸ್ತು ಮಂಕು ಕವಿದಿತ್ತು. officeಗೆ ಬಂದು ಸ್ವಲ್ಪೇ ಹೊತ್ತು ಆಗಿದೆ; ಆದ್ರೆ ಯಾಕೆ ಹೀಗನ್ನಿಸ್ತಿದೆ ಅಂತ ಒಂದ್ಸರಿ ಗಡಿಯಾರ ನೋಡ್ದೆ. ಗಂಟೆ 12 :15 ..
ಸಮಯ ನೋಡಿದ್ಕೇನೋ ಏನೋ, ಅಷ್ಟೊತ್ತು ಇಲ್ದೆ ಇದ್ದ ಹಸಿವು ಅನ್ನೋ sincere ಕರೆಗಂಟೆ ಹೊಟ್ಟೆ ಅನ್ನೋ alarm ಪೆಟ್ಟಿಗೆ ಒಳಗಿಂದ ಮೊಳಗೋದಕ್ಕೆ ಶುರು ಮಾಡ್ತು..
ಯಾವಾಗ್ಲೂ 12 :30 ರಿಂದ 1:00 ಗಂಟೆ ಸಮಯದಲ್ಲಿ ಸ್ನೇಹಿತರ ಜೊತೆ ಊಟಕ್ಕೆ ಹೊರಡೋ ಅಭ್ಯಾಸ. ಇವತ್ಯಾಕೊ, ಇನ್ನೂ ಸಮಯ ಇದೆ ಅಂತ ಬುದ್ಧಿ ಯೋಚಿಸ್ತಿದ್ರು ಕೂಡ ಮನಸಲ್ಲೋ ಅಥವಾ ಹೊಟ್ಟೆಲೋ ಒಂದು ಸೆಳೆತ ಇತ್ತು; "ಎದ್ದು ಹೊರಗೆ ಹೋಗಪ್ಪ ಸಾಕು ಕೆಲಸ ಮಾಡಿದ್ದು" ಅಂತ ಯಾರೋ ಹೇಳಿದಾಗೆ. ಅದು ಹಸಿವಿನ ಸಂಕಟಕ್ಕೆ ಹೊಟ್ಟೆಯಿಂದ ಬಂದ ಅಶರೀರವಾಣಿಯೋ ಅಥವಾ ಬೇರೆಡೆಯಿಂದ ಬಂದ ಕೂಗೋ ಗೊತ್ತಾಗ್ಲಿಲ್ಲ.
ಸಮಯ ಆಯ್ತು. ಎಲ್ರೂ ಹೊರುಟ್ವಿ. ಹೊರಗಡೆ ಮಧ್ಯಾಹ್ನ ಆಗಿದೆ ಅನ್ನೋದ್ಕೆ ಯಾವುದೇ ಗುರುತಿರ್ಲಿಲ್ಲ. ಸೂರ್ಯ ನೆತ್ತಿ ಮೇಲೆ ಬಂದು ಬಿಸಿಲಿನ ಝಾಳಕ್ಕೆ ಥಕಥೈ ಅಂತ ಕುಣಿಯೋ ಹಾಗೆ ಮಾಡೋ ಹೊತ್ತು ಆಗ್ಲೇ ಹತ್ರ ಬಂದಿತ್ತು. ಆದ್ರೂ ಕೂಡ, ಸೂರ್ಯ ಭೂಮಿ ಮೇಲೆ ಅದೇನೋ ನೋಡಿ ನಾಚಿಕೊಂಡು, ಮೋಡದ ಮರೆಗೆ, ಕಳ್ಳನ ಹಾಗೆ, ಆಗೊಮ್ಮೆ ಈಗೊಮ್ಮೆ ಇಣುಕಿ ಅದೇನೋ ನೋಡ್ತಿದಾನೆ ಅನ್ನಿಸ್ತು.
ಕೆಲಸ ಮಾಡೋ ಸ್ಥಳದಲ್ಲಿ ಖಾನಾವಳಿಗಳು ಅಂತ ಇರ್ತಾವೆ; ಅದ್ನ 'canteen ' ಅಂತಾನು ಕರಿತಾರೆ. ಅವುನ್ನೇ ಈ ಆಧುನಿಕ, ಪಾಶ್ಚಿಮಾತ್ಯದ ಪ್ರಭಾವ ಇರೋಂತ ಕೆಲಸದ ಸ್ಥಳಗಳಲ್ಲಿ 'Food Court ' ಅಂತಾರೆ. ಅದೇ, Tennis Court , Civil Court ,High Court ;ಹಾಗೆ. ಇಲ್ಲಿ ಗಮನಿಸಬೇಕಾದ ವಿಷ್ಯ ಅಂದ್ರೆ; ಎಲ್ಲ Court ಗಳು ವಿವಾದಾತ್ಮಕವಾದ್ದೆ; Food Court ನು ಸೇರಿಸಿ. ಊಟದ quality , ಶುದ್ಧತೆ, ದರ ಪಟ್ಟಿ; ಎಲ್ಲದರಲ್ಲೂ ವಿವಾದ ಇರುತ್ತೆ. ಎಷ್ಟೇ ಮಾತಾಡಿದ್ರು, ವಿವಾದ ಹೊಸದಾಗಿರುತ್ವೆ ಹೊರತು ಊಟ ಹಳತೇ ಆಗಿರುತ್ತೆ. No change ..!! ಇಂಥ ಭಕ್ಷ್ಯ ಭೋಜನ ಮಾಡೋ ಕರ್ಮದ ಮಧ್ಯೆ ಕಾಣ್ಸಿದ್ದೆ, ಕರ್ಮದ ಪಾಪ ತೊಳೆಯೋಂತ ಸೌಂದರ್ಯ-ಆಕರ್ಷಣೆ ಇರೋ ಸ್ನಿಗ್ಧ ನಿಲುವಿನ ಚೆಲುವೆ.
ಇಷ್ಟ ಆಗೊಂತ ಹುಡುಗಿ ಕಾಣ್ಸಿದ್ದೆ ತಡ, 'ತಂಪಾದ ಗಾಳಿ ಬೀಸಿ, ಹಕ್ಕಿಗಳು ಗುನುಗಿ, chorus ಗೆ ಅಂತ ಸುತ್ಲು ಒಂದ್ ನಾಲ್ಕು ಜನ violin ಹಿಡ್ಕೊಂಡು ಬಾರ್ಸಿ, ಅವ್ಳೇನಪ್ಪನಿನ್ನವ್ಳು' ಅಂತ ಹೇಳೋ ಹಾಗೆ ಆಗುತ್ತೆ ಅಂತ ಸುಮಾರು Film ಗಳಲ್ಲಿ ನೋಡಿದ್ದೆ, ಕೆಲವು friends ಹೇಳೋದ್ನು ಕೇಳಿದ್ದೆ.. ಮಣ್ಣಂಗಟ್ಟಿ..!! ಅಂಥದ್ದೇನೂ ಆಗ್ಲಿಲ್ಲ ನಂಗೆ. ಆದ್ರೂ, ಅವ್ಳು ನನ್ ಜೀವನದ ಕೊನೆವರ್ಗು ಜೊತೇಲಿರೋ ಸಂಗಾತಿ ಆಗ್ಬಿಟ್ರೆ ಚೆನ್ನಾಗಿರುತ್ತೆ ಅನ್ಸಿದ್ದಂತೂ ನಿಜ.
Corporate environment ಗಳಲ್ಲಿ ಕೆಲಸ ಮಾಡೋ ನನ್ನಂಥವ್ರಿಗೆ ಹುಡಿಗೀರ ಬಗ್ಗೆ ಒಂದು image ತಲೇಲಿ ಕೂತ್ಕೊಂಡ್ಬಿಟ್ಟಿರುತ್ತೆ. ತುಂಬಾ ಚೆನ್ನಾಗಿ, stylish ಆಗಿ ಡ್ರೆಸ್ ಮಾಡ್ಕೊಂಡು ಬರೋದ್ರಲ್ಲಿ North Indian ಹುಡುಗೀರ ಸಂಖ್ಯೆನೇ ಜಾಸ್ತಿ. ಅದು ನಿಜಾನೂ ಕೂಡ. ನಮ್ಮ South Indian ಅಥವಾ ಕನ್ನಡದ ಹುಡುಗೀರು ನೈಜ ಸೌಂದರ್ಯಕ್ಕೆ(Natural Beauty ಗೆ) ಪ್ರಾಮುಖ್ಯತೆ ಕೊಡೋದ್ರಿಂದ ಅವ್ರಿಗೆ ಹೋಲ್ಸಿದ್ರೆ ಸ್ವಲ್ಪ ಭಿನ್ನವಾಗಿ ಕಾಣುಸ್ತಾರೆ; ಹಾಗಂತ ಸೌಂದರ್ಯದ, ಬುದ್ಧಿವಂತಿಕೆಯ ವಿಷಯದಲ್ಲಿ ಅವ್ರುಗಳ್ಗೆ ಸರಿ ಸಮಾನರೂ; ಕೆಲವು ಸರ್ತಿ ಮೀರಿಸೋಂಥವ್ರೂ ಕೂಡ ಆಗಿರ್ತಾರೆ. Bold & Beautiful ಅಂತಾರಲ್ಲ ಹಾಗೆ.
ನಮ್ಗೂ ಕೂಡ ಒಂದ್ ಕ್ಷಣಕ್ಕೆ Modern ಚೆಲುವೆ(!?) ಆಕರ್ಷಿತಳಾಗಿ ಕಂಡ್ರೂ ಕೂಡ; ಅವ್ಳು ಕೇವಲ ಮಳೆ ಬೀಳೋ ಮುನ್ನ ಬಂದು ಹೋಗೋ ಮಿಂಚಿದ್ದಂತೆ ಅಷ್ಟೇ. ಮನಸ್ಸು ತಂಪು ಮಾಡೋ ಮಳೆ ಅಂತವ್ಳು ಯಾವಾಗ್ಲು ನೈಜ ಸೌಂದರ್ಯದ ಹುಡಿಗೀನೇ.
ಇಂಥ ನೈಜ ಸೌಂದರ್ಯಕ್ಕೇ ಒಡತಿ ಅನ್ಸೋಂತ ಚೆಲುವೇನೇ ಅವತ್ತು ಕಾಣ್ಸಿದ್ದು.
ಅವಳು-ಅವಳ ಸ್ನೇಹಿತರ ಗುಂಪು ತೀರ ಸಮೀಪದಲ್ಲೇ ಇತ್ತು. ಒಂದೇ ವಿಷಯಕ್ಕೆ ಪದೇ-ಪದೇ ಮಾರುಹೋಗೋದು, ಪರವಶವಾಗೋದು ಅಂತಾರಲ್ಲ, ಹಾಗೇ ಆಗ್ತಿತ್ತು ಅವ್ಳನ್ನ ಪ್ರತಿ ಸರ್ತಿ ನೋಡಿದಾಗ್ಲು.
'ಇವ್ಳು ಕಾಣ್ಸಿದ್ time ನಲ್ಲೆ ಊಟ ಯಾಕಪ್ಪ ಮಾಡ್ತಿದೀನಿ, ಪ್ರತಿ ತುತ್ತಿಗೂ ತಲೆ ತಗ್ಗಿಸಿ ತಿನ್ಬೇಕಲ್ವ; ಆ ಕ್ಷಣಕ್ಕೆ ಅವ್ಳನ್ನ ನೋಡೋ ಸೌಭಾಗ್ಯದಿಂದ ವಂಚಿತನಾಗ್ತಿದಿನಲ್ಲ' ಅನ್ನಿಸ್ತಿತ್ತು. ಬೇಗ ಊಟ ಮುಗಿಸಿದ್ರೆ ಸಾಕು ಅನ್ಸೋಂತ  ಧಾವಂತ. ಅದೇ ಆತುರತೇಲಿ ನಾನೇನೋ ಮುಗಿಸ್ದೆ; ಆದ್ರೆ friends ಕೂಡ ಮುಗಿಸ್ಬಿಟ್ರು.!! ಕೆಡ್ತಲ್ಲಪ್ಪ ಕೆಲಸ; ಇನ್ನೇನು ಇಲ್ಲಿಂದ ಎದ್ದೆ ಹೋಗ್ಬಿಡ್ತೀವಿ, ಹೆಂಗೆ ಅವ್ಳನ್ನ observe ಮಾಡೋದು ಅಂತ ದ್ವಂದ್ವ ಮಿಶ್ರಿತ ಕೋಪ ಬಂತು. ಆಗ ನೆನಪಾಯ್ತು ಹಿಂದಿಯಲ್ಲಿ ಇರೋ ಒಂದು ಮಾತು "ದುಶ್ಮನ್ ಕಹಾ ಹೈ ಅಂದ್ರೆ ಬಗಲ್ ಮೆ" ಅಂದಂಗೆ..!!
ಇನ್ನೇನ್ ಮಾಡೋದು ಅಂತ ಎಲ್ರೂ ಎದ್ವಿ. ಪ್ರತಿದಿನ ಊಟ ಆದ್ಮೇಲೆ, ನಮ್ಗಳಿಗೆ ಅಂತಾನೆ ಕಟ್ಸಿದಾರೇನೋ ಅನ್ಸೋಂತ, swimming pool ಪಕ್ಕದಲ್ಲೇ, ಬಂಡೆಗಳ ಮೇಲೆ, ಹಲಗೇಲಿ ಕಟ್ಟಿರೋಂತ resting /timepass ಜಾಗ ಒಂದಿದೆ. swimming pool ನೆ ನದಿ, ಬಂಡೆಗಳನ್ನೇ ಬೆಟ್ಟ ಗುಡ್ಡಗಳು, ಅದ್ರ ಬದಿಗಳಲ್ಲೇ ನೆಟ್ಟಿ ಬೆಳೆಸಿರೋಂತ ಹುಲ್ಲು ಹಾಸನ್ನೇ ಹರಿದ್ವರ್ಣದ ಕಾಡುಗಳು, ಎದುರಿಗೆ ಓಡಾಡೋ ಹೆಣ್ಮಕ್ಕಳೇ ಜಿಂಕೆಗಳು; ನಾವು ಅಲ್ಲಿಗೆ ಬಂದಿರೋ ಕಾಡಿನ ಸೌಂದರ್ಯ ಪ್ರಿಯರು ಅನ್ನೋ feeling ನಲ್ಲಿ ಕೂತಿರ್ತೀವಿ. ಎಷ್ಟು ಹೊತ್ತು ಕೂತಿರ್ತೀವಿ ಅಂದ್ರೆ; ಸಿಕ್ಕಾಪಟ್ಟೆ ಕೆಲ್ಸ ಮಾಡಿ ಒಂದು ದೊಡ್ಡ ಬ್ರೇಕ್ ಬೇಕು ಅನ್ಸೀನೋ ಅಥವಾ ಕೆಲಸಾನೆ ಇಲ್ದಿರಾ ಖಾಲಿ ಇರೋದ್ರಿಂದಾನೋ ಗೊತ್ತ್ತಿಲ್ಲ. Friends ಎಲ್ರು ಇರೋದ್ರಿಂದ ಅಲ್ಲಿ ಕೂತಿರೋ ಅಷ್ಟೊತ್ತೂ ಮಜಾ ಅಂತು  guarantee.
ಅದೇ ಸಮಯಕ್ಕೆ ಮನಸ್ಸು ಮತ್ತೆ ಖುಷಿ ಪಡೋಂತ ಘಟನೆ ನಡೀತು. ಸರಿಯಾಗಿ ನನ್ನ ಎದುರಿಗೇನೆ ಇರೋ juice center ಗೆ ಮುಂಚೆ ನೋಡಿದ್ದ ಚೆಲುವೆ ಬಂದ್ಲು, ಅವ್ಳ ಫ್ರೆಂಡ್ಸ್ ಜೊತೆ.
ಹಸ್ಕೊಂಡಿದ್ದು ರೊಟ್ಟಿ ತಿಂತಿದ್ದವನ ಹತ್ರ ಅದ್ನೂ ಕಸ್ಕೊಂಡೋಗಿ ಮತ್ತೆ ಬಂದು ಬೆಣ್ಣೆ ದೋಸೆ ಕೊಟ್ಟು 'ಮಜಾ ಮಾಡು' ಅಂದಾಗ ಸಿಗೋ ನೆಮ್ಮದಿ-ಖುಷಿ ನಂಗೆ ಸಿಕ್ತು; ಅವಳನ್ನ ಮತ್ತೆ ನೋಡಿ.
ಯಾವಾಗ್ಲು ಮಾತಾಡ್ಕೊಂಡು ಒಬ್ರಿಗೊಬ್ರು ಕಾಲೆಳಕೊಂಡು ಮಜಾ ಮಾಡ್ತಿದ್ದ ಎಲ್ಲರ ಮಾತುಗಳು ನಂಗೆ ಯಾಕೋ disturbance ಅನ್ನಿಸ್ಬಿಡ್ತು. ಎಲ್ರವೂ ವಟ ವಟ ಅನ್ಸೋಂತ ಧ್ವನಿ ಅನ್ನಿಸ್ತು. ಆದ್ರೂ, ಶ್ರೀ ರಾಮನ ಬಾಣದ ಹಾಗೇನೇ ನನ್ನ ದೃಷ್ಟಿ ಅವ್ಳ ಮೇಲೇನೇ ಇತ್ತು. ನಾನು ನೋಡ್ತಿರೋದು ಅವ್ಳಿಗೆ ಗೊತ್ತಾಗ್ಲಪ್ಪ, ಮೊಳಕೆ ಬಿತ್ತಿದಂಗೆ ಆಗುತ್ತೆ ಅನ್ಸೋ ಯೋಚ್ನೆ ಒಂದ್ ಕಡೆ ಆದ್ರೆ, ನೋಡ್ತಿದೀನಿ ಅಂತ ಅವ್ಳಿಗೆ ಗೊತ್ತಾಗ್ಬಿಟ್ರೆ ಏನನ್ಕೊತಾಳೊ ಅನ್ನೋ ಭಯ ಇನ್ನೊಂದ್ಕಡೆ. ಇದೇ ಮಿಶ್ರಿತ ಭಾವನೆಗಳ ಮಧ್ಯ ಹೊರಡೋ ಸಮಯ ಬಂತು. ಅವ್ಳು ಕೂಡ ಹೊರಟು ನಿಂತ್ಲು. ಇವತ್ತಿನ episode ಮುಗೀತು ಅನ್ನಿಸ್ತು.
ಹೀಗೇ ಎರಡು-ಮೂರು ದಿನ ಕಳೀತು. ಈ gap ನಲ್ಲೇ ಸ್ವಲ್ಪ detective ಕೆಲ್ಸ ಮಾಡಿ; ಅವ್ಳು ಯಾರು, ಹೆಸರೇನು, ಪರಿಚಯಸ್ತರು ಯಾರ್ಯಾರು, ಎಲ್ಲಿರೋದು, ಹೋಗಿ-ಬರೋ time , ದಾರಿ, ಎಲ್ಲ ತಿಳ್ಕೊಂಡಿದ್ದಾಯ್ತು.
ಮನಸೊಳಗೆ ಇರೋ ಪ್ರೀತೀನ ಅಲ್ಲೇ ಹಳಸಿ ಹೋಗೋಕೆ ಬಿಡದಿರ ಅವ್ಳಿಗೆ ಹೇಳಿಬಿಡೋದೇ ಒಳ್ಳೇದು ಅನ್ಸಿ ಒಂದು ಭಂಡ ಧೈರ್ಯ ಮಾಡಿ ಹೇಳೇಬಿಡಣ  ಅಂತ ನಿರ್ಧರಿಸಿದ್ದೂ ಆಯ್ತು.
ಅವತ್ತು, ಎಂದಿನಂತೆ ಸ್ವಲ್ಪ ಬೇಗ ಬಂದು ಅವ್ಳು ಬರೋ ದಾರೀಲಿ ಕಾಯ್ತಾ ನಿಂತಿದ್ದೆ. ಅವ್ಳು ಬರ್ತಿದ್ದನ್ನ ನೋಡಿ ನಿಧಾನವಾಗಿ ನಡಿಯೋಕೆ ಶುರು ಮಾಡಿದೆ.
ಇದು college ಅಲ್ಲ, office environment ; propose ಮಾಡಿದ್ರೆ ಎಲ್ಲಿ ಬೀಳ್ತದೋ ಗೂಸ! ಯಾವ HR ಗೆ ಹೋಗಿ ಮುಟ್ಟುತ್ತೋ ವಿಷ್ಯ! ಒಪ್ತಾಳೋ ಇಲ್ವೋ ! ಒಪ್ಪಿದರೆ ಹೇಗ್ react ಮಾಡೋದು? ಒಪ್ಪದೇ ಇದ್ರೆ ಹೇಗ್ react ಮಾಡೋದು? ಅಂತೆಲ್ಲ negative thoughts ಕೂಡ ಬರ್ತಿದ್ವು. ಆಗ ನೆನಪಾಯ್ತು training time ನಲ್ಲಿ ಇಷ್ಟ ಇಲ್ದಿದ್ರೂ attend ಆಗಿದ್ದಂತ 'Behavioural Skills 'ನ classes . 'Optimistic Behaviour ' ಅನ್ನೋ ಒಂದು ತುಣುಕು ನೆನಪಾಯ್ತು.ಆಗ ಅನ್ಕೊಂಡೆ, ಒಪ್ಪೇ ಒಪ್ತಾಳೆ; ಫಲಾನುಫಲಕ್ಕಿಂತ ಪ್ರಯತ್ನ ಮುಖ್ಯ ಅನ್ನಿಸ್ತು. ಗಟ್ಟಿ ಮನಸ್ಸು ಮಾಡಿ ನಡೀತಾ ಇದ್ದೆ. ಪಕ್ಕ ಬಂದ್ಲು. ಸ್ವಲ್ಪ ಮುಂದೆ ಹೋದ್ಲು. ಮೈ ನಡುಕ ಆಯ್ತು; ಮತ್ತೆ ಆ classes ನೆನಪಾಯ್ತು. ಥೇಟ್ English ನವರ ಹಾಗೆ 'Excuse Me ' ಅಂದೆ. ತಿರುಗಿ ನೋಡಿ 'Yes ' ಅಂದ್ಲು. ಅಯ್ಯೋ ದೇವರೇ, ಇಷ್ಟು ಹತ್ರದಿಂದ ನೋಡ್ತಿದೀನಿ. ಎಂಥಾ ಚೆಲುವು. Life ನಲ್ಲಿ miss ಮಾಡ್ಕೊಬಾರ್ದು ಅನ್ಸಿ ಮಾತಾಡಕೆ ಶುರು ಮಾಡ್ದೆ.
'ನಾನು ನಿಮ್ಮನ್ನ ಇಷ್ಟ ಪಡ್ತಿದೀನಿ. ನೀವೇ ನನ್ನ ಬಾಳ ಸಂಗಾತಿ ಆದ್ರೆ ತುಂಬಾ ಚೆನ್ನಾಗಿರುತ್ತೆ ಅನ್ನಿಸ್ತಿದೆ. ನನ್ನ ಮದುವೆ ಮಾಡ್ಕೋತೀರ ?' ಅಂತ ಕೇಳೇಬಿಟ್ಟೆ. ಕೇಳಿದ್ಮೇಲೆ ನಂಗೇನೇ shock ಆಯ್ತು; ಒಂದೇ ಸರ್ತಿ ಮದುವೆ ಬಗ್ಗೆ ಕೇಳಿಬಿಟ್ನಾ ಅಂತ.! ಆ 'Behavioural classes ' ಬಡ್ಡಿ ಮಗ ಇಂಥ ಧೈರ್ಯ ತುಂಬ್ಸಿ ಹಾಳು ಮಾಡಿಬಿಟ್ನೇನೋ ಅನ್ಸಿ, ಅವಳ ಪ್ರತಿಕ್ರಿಯೆಗೆ  ಕಾಯ್ತಿದ್ದೆ. ಹೇಳಿದ್ಮೇಲೆ ಒಂದ್ ಕ್ಷಣ ಕಣ್ಣು ಮುಚ್ಕೊಂಡೆ. Film ಗಳಲ್ಲಿ ನೋಡಿದ್ದೆ, propose ಮಾಡಿದ್ ತಕ್ಷಣ ಹುಡುಗಿ ಹುಡುಗನ ಕೆನ್ನೆಗೆ 'ರಪ್' ಅಂತ ಒಂದ್ ಬಿಡ್ತಾಳೆ. ಹಾಗೆ ಆಗುತ್ತೇನೋ, ಮುಂಚೇನೇ ಕಣ್ ಮುಚ್ಚಿಕೊಂಡ್ರೆ ಹೊಡೆತದ ನೋವು ಸ್ವಲ್ಪ ಕಡಿಮೆ ಇರುತ್ತೆ ಅನ್ನೋ feeling ನಲ್ಲೆ ಕಣ್ ಮುಚ್ಕೊಂಡೆ.
ಅವ್ಳು ಶುರು ಮಾಡಿದ್ಲು ಮಾತಾಡಕೆ. ಸಧ್ಯ ಹೊಡೀಲಿಲ್ಲ.!! 'I am not interested ' ಅಂದ್ಬಿಟ್ಲು ಒಂದೇ ಸರ್ತಿ.! ಮನೆ ಮುಂದೆ sales person ಬಂದಾಗ ಅಮ್ಮ ಅವ್ರ ಕಾಟ ತಡೀಲಾಗ್ದೆ ಹೇಳ್ತಾಳಲ್ವ ಅದೇ ರೀತಿ. ನಂಗೇನ್ ಬಂತು ದೊಡ್ ರೋಗ; ಮತ್ತೆ ಹೇಳ್ದೆ; 'ಪರವಾಗಿಲ್ಲ, ಯೋಚ್ನೆ ಮಾಡಿ ಹೇಳಿ, I will be waiting ' ಅಂತ. ಆ 'ಪರವಾಗಿಲ್ಲ' ಅನ್ನೋ ಮಾತು ಹೇಗಿತ್ತಂದ್ರೆ, ನಾನೇ ಅವಳ ಮೇಲೆ ಕೃಪೆ ತೋರಿಸ್ತಿರೋ ಹಾಗೆ.. ಆ ಮಾತಿಗೆ 'oofi , oofi ..' ಅನ್ನಣ ಅನ್ಕೊಂಡೆ; ಅಷ್ಟರಲ್ಲಿ ಅವ್ಳು; 'Sorry , ನಂಗೇ ಇದೆಲ್ಲ ಇಷ್ಟ ಇಲ್ಲ' ಅಂದು ಹೋಗಿಬಿಟ್ಲು. 'ಸರಿ, ಇನ್ಯಾವ ಥರ ಹೇಳಿದ್ರೆ ಇಷ್ಟ ಆಗುತ್ತೆ, ಅದನ್ನಾದ್ರು ಹೇಳ್ರಿ' ಅಂತ ಕೇಳಣ ಅನ್ಕೊಂಡೆ. ಇಷ್ಟೊತ್ತು ಮಾಡಿದ ಸಾಧನೇನೆ ಸಾಕು, ಸಿಕ್ಕಿರೋ 'ಪ್ರಶಂಸೆ 'ನ ಸುಧಾರಿಸ್ಕೊಳಣ ಅಂತ ಸುಮ್ನಾಗಿ office ಗೆ ಹೋದೆ. 
ಅವ್ಳಿಗೆ ತಿಳ್ಸಿ ಸರಿಯಾದ ಕೆಲಸ ಮಾಡಿದ್ನೋ ಇಲ್ವೋ ಅನ್ನೋ ಯೋಚ್ನೆ ಕಾಡೋಕೆ ಶುರುವಾಯ್ತು. ಅತ್ಲಾಕಡೆ ಕೆಲಸಾನೂ ಸರಿಯಾಗಿ ಮಾಡ್ದೆ, ಇತ್ಲಾಗೆ ಯೋಚನೇನೂ  ಮಾಡಕಾಗ್ದೆ ದ್ವಂದ್ವದಲ್ಲೆ ದಿನ ಕಳೀತು.
ಹುಡುಗರು love ವಿಷ್ಯದಲ್ಲಿ ಸಿಕ್ಕಾಪಟ್ಟೆ optimistic ಆಗಿರ್ತಾರಂತೆ. ನಾನೂ ಕೂಡ ಅದೇ ರೀತೀಲಿ ರಾತ್ರಿ ಇನ್ನೊಂದು ಮಹತ್ಕಾರ್ಯ ಮಾಡ್ದೆ.! Facebook ಅನ್ನೋ ಬಹು ದೊಡ್ಡ 'ಸ್ನೇಹಿತರ(!)' ತಾಣದಲ್ಲಿ ಅವಳನ್ನ ಹೆಕ್ಕಿ ಹುಡುಕಿ 'Friend Request ' ಒಂದು ಕಳಿಸಿಬಿಟ್ಟೆ. 'ನಂಗೆ ಇದೆಲ್ಲ ಇಷ್ಟ ಇಲ್ಲ' ಅಂದಿದ್ಲಲ್ವ; road ನಲ್ಲಿ ಹಳೆ ಕಾಲದವ್ರ ಥರ ಹೇಳೋದು ಇಷ್ಟ ಇಲ್ವೇನೋ , ಈ generation ನವರ ಥರ technology use ಮಾಡಿ ಹೇಳುದ್ರೆ ಇಷ್ಟ ಆಗ್ಬೋದೇನೋ ಅನ್ನಿಸ್ತು; ಅದ್ಕೆ facebook ಸಹಾಯ ಮಾಡ್ತು. ಒಂದೆರಡು ದಿನ ನೋಡ್ದೆ; Accept ಆಗಿದ್ದಾಗ್ಲಿ , reject ಆಗಿದ್ದಾಗ್ಲಿ ಏನೂ ಗೊತ್ತಾಗ್ಲಿಲ್ಲ. ಆಮೇಲೆ ಬಂತು, ಲವ್ವಲ್ಲಿ ತಿರಸ್ಕ್ರುತರಾದ ಹುಡುಗರಿಗೆ ಮೂಡೋಂತ "Lover ಆಗ್ದಿದ್ರೂನೂ atleast Friend  ಆಗಿ ಆದ್ರು ಅವ್ಳು ನಂಜೊತೆ ಇದ್ರೆ ಸಾಕು, ಬಾಳು ಪಾವನ" ಅನ್ನೋ ಸಿಕ್ಕಾಪಟ್ಟೆ 'ತುಕ್ಕಾಲ್' thought . Practically impossible ಅನ್ಸುದ್ರೂ, 'ಬಾಳೆಂಬ ರೈಲಲ್ಲಿ ಹೆಂಡ್ತಿ ಅನ್ನೋ ಬೋಗಿ ಅಲ್ದಿದ್ರು Friend ಅನ್ನೋ ಬೋಗಿ ಆದ್ರು ಆಗಿ ಉಳಕೊಳ್ಳಿ' ಅನ್ಸೋಂತ confused thought ಅದು.
Food Court ನಲ್ಲಿ ನೋಡೋದು, ಕನಸು ಕಾಣೋದು, ಇದೆ routine ಆಗಿತ್ತು. ಅವ್ಳ friends ಎಲ್ಲ ನನ್ ಕಡೆ ನೋಡೋದು, ಗುಸು ಗುಸು ಅನ್ನೋದು; ಎಲ್ಲ ನೋಡಿ ತಲೆ ಕೆಡ್ತಿತ್ತು.!
ಒಂದ್ ದಿನ ನಂಬರ್ ಹುಡುಕಿ message ಮಾಡಿದ್ಲು. ಆಗ cadbury , ಅವ್ರುದು advertisement ನೆನಪಾಯ್ತು; "ಏನು ಮರಿ, ಲಾಡು ಬಂದು ಬಾಯಿಗೆ ಬಿತ್ತ?" ಅಂತ. ನಂಗೆ ನಾನೇ ಒಂದ್ಸಾರಿ ತಲೆ ಆಡಿಸ್ದೆ ಖುಷೀಲಿ.
ಮಾತುಕತೆ ಶುರು ಆಗಿ, coffee , ಈಗ ಸಂಜೆ ಮನೆಗೆ ಹೊರಟಾಗ ಬಸ್ terminus ಗೆ ಜೊತೇಲಿ ಹೋಗೋವರೆಗೂ ಬಂದಿದೆ. Facebook ನ ಅವಳ friends list ನಲ್ಲಿ ನನ್ಹೆಸರು, ನನ್ friends list ನಲ್ಲಿ ಅವ್ಳ ಹೆಸರು ನೋಡೋದೇ ಖುಷಿ ಆಗ್ಬಿಟ್ಟಿದೆ.
ಇದರ ಮಧ್ಯೆ; 'Not interested ' ಅಂದಿದ್ದವ್ಳು ಇಷ್ಟು ಚೆನ್ನಾಗಿ ಮಾತಾಡ್ಕೊಂಡು; ಆತ್ಮೀಯ ಮಾತುಗಳ್ನ ಆಡೋಷ್ಟು ಹತ್ರ ಯಾಕೆ ಆಗಿದಾಳೆ ಅನ್ನೋ ಯೋಚ್ನೆ ಬಂದೇಬಿಡ್ತು ತಲೆಗೆ. ಸುಮ್ನೆ ನಂಗೆ ನಾನೇ 'ಮುಂದೆ ಸಿಕ್ತಾಳೆ' ಅನ್ನೋಂತ ಊಹೇಲಿ ಇದ್ದು ತಲೆ ಕೆಡಿಸ್ಕೊಳೋಕಿಂತ ಕೇಳೇಬಿಡಣ ಅಂತನ್ನಿಸ್ತು, ಕೇಳ್ದೆ ಕೂಡ. ಅದಕ್ಕವಳು 'ನೀನು ತುಂಬಾ ಒಳ್ಳೆವ್ನು ಅನ್ಸುತ್ತೆ ನಂಗೆ. ನಿನ್ನ ನಡವಳಿಕೆ, ಹೆಂಗಸರಿಗೆ ಕೊಡೊ ಗೌರವ, ಮಾತು ಎಲ್ಲ ಇಷ್ಟ ಆಗುತ್ತೆ, ನಾನು ನಿನ್ನ friend ಆಗಿರ್ಬೇಕು ಅನ್ನಿಸ್ತು ಅದುಕ್ಕೆ' ಅಂತಂದ್ಲು..!!
ಅಲ್ಲಾರಿ, ನನ್ ಮನಸಲ್ಲಿ ಅವ್ಳ ಬಗ್ಗೆ ಇರೊ ಭಾವನೆ ಏನು ಅಂತ ಅವ್ಳಿಗೂ ಗೊತ್ತು, 'Only Friend ' ಅನ್ನೋ ಭಾವನೆ ಬರೋದು practically impossible ಅಂತಾನು ಗೊತ್ತು; ಆದ್ರೂ ಯಾಕೆ ಹೀಗೆ 'Only Friend ' ಅಂತ ಪರಿಚಯ ಮಾಡ್ಕೊಳ್ತಿರೋದೋ ಗೊತ್ತಿಲ್ಲ. ಇದೆ doubt ನಲ್ಲಿ, ಸಿಕ್ತಾಳೆ ಅನ್ನೋ hope ನಲ್ಲಿ ಕಾಯ್ತಾ ಇದೀನಿ...

No comments:

Post a Comment