ಒಮ್ಮೆ ತಿರುಗಿ ನೋಡು ನೀನು,
ನೋಡಿ ಒಂದ್ಸರಿ ನಕ್ಬಿಡ್ ನೀನು;
ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
ಮಲ್ಲೆ ಹೂವ ಘಮದಲ್ ಬಂದು,ನನ್ನುಸಿರ್ ಅದ್ರಲ್ ಬೆರಸು ನೀನು,ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
ಮೈ ಮರತು ನನ್ ಹೆಸ್ರುನ್ ಕೂಗು,
ಅರಿವಿಗ್ ಬಂದ್ಮೇಲ್ ನಾಚಿಕೇಲ್ ಬೀಗು;
ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
ಅಷ್ಟೇ ಸಾಕು ನಂಗೆ..!!!ಯಾವ್ದುಕ್ಕು ಇರಲಿ ನೆಂಪಿಗಂತ,ಮುತ್ತನೊಂದು ಕೊಟ್ಟಿರ್ ನೀನು;ಮತ್ತೆ ಭೇಟಿ ಆಗೋವರಗು ಅಷ್ಟ್ ಸಾಕು ನಂಗೆ..!
No comments:
Post a Comment