ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, March 23, 2020

ಅಣುವಿಗೆ ವೈರಾಣು..!!


ನಾನೆಂಬ ಅಣುವಿಗದು(ಮನುಷ್ಯ)  ನಾವೆಂಬುದಿಲ್ಲ,
ಸರ್ವಹಿತ  ಬಾಳ್ವೆಯದು ಕಾಣದಿದೆಯಲ್ಲ!
ಪರಿಸರಕೆ ಕಾಣ್ಕೆಯ ಪೋಷಾಕು ಧರಿಸಿ
ಬೆನ್ನಲ್ಲಿ ಚೂರಿ, ನೆತ್ತರನು ಹರಿಸಿ;
ತೊಯ್ದಿರುವ ಪಾಪದ ಹೊಳೆಯಲ್ಲಿ ನಾವೆ,
ಮುಳುಗದಲೆ ಕಾಪಿಡಲು ಸನ್ಮತಿಯ ದಾವೆ;
ತೀರ್ಪಿನಾ ಮರ್ಜಿಗೆ ಪ್ರಕೃತಿ ಅಹವಾಲು,
ದೊರೆತಾಗ ಭಗವಂತನಾ ದಾಪುಗಾಲು;
ಸಮತತ್ತ್ವ ಸಾಧಿಸಲು ದೈವ ಬಗೆದಾಗ
ಅಣುವಿಗೆ ಅಣುವೇ ಸೈ ಪೈಪೋಟಿ ಈಗ..

No comments:

Post a Comment