ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Sunday, April 2, 2017

ಕವಿಯಲ್ಲ.!

ಕವಿಯಲ್ಲ ಕವಿಯಲ್ಲ ಎಂಬೆಂದು ಹೇಳುತಲಿ
ಗೀಚುತ್ತಲೇ ಇದ್ದಂತ ಭಾವತುಣುಕು,
ತಿಳಿಯದೆ ದಾಟುತಲಿ ಭಾವನೆಯ ಪರಿಧಿಯನು
ಕಂಡಿಹುದು ಬರವಣಿಗೆ ದಿವ್ಯ ಬೆಳಕು.
ಇನ್ನೆಲ್ಲಿ ನಿಲುಗಡೆ, ಇನ್ನೆಲ್ಲಿ ಅಡೆತಡೆ,
ಇನ್ನಂತು ಸಂಚಲನ ಪುಟಗಳಲ್ಲಿ;
ಭಾವನೆಯ ಸರಪಳಿ ಮೇಳೈಸಿಕೊಂಡು
ಮೂಡಿಹುದು ಜೀವವದು ಕುಸುರಿಯಲ್ಲಿ..

No comments:

Post a Comment