ಚುಂಬನ ಪ್ರೇರಿತ ಸಂಚನು ರೂಪಿತ
ಮಧುರ ಲಾಲಿತ್ಯ ತಿಲ್ಲಾನ;
ಸಾಂಗೋಪಾಸನೆ ಸನಿಹ ಪ್ರಚೋದಿತ
ಅಧರ ಕದನವದು ತಿಲ್ಲಾನ..
ಮುತ್ತುಗಳಾದವು ನೆನಪಿನ ಸಂಚಯ
ಮೆದುಳಿನ ರಿಂಗಣ ತಿಲ್ಲಾನ;
ತೋಳಿಗೆ ತೋಳದು ತಾಕುತ ಸಾಗಲು
ಬೆರಳಿನ ಕಂಕಣ ತಿಲ್ಲಾನ..
ಸುರಚಿತ ಭಾವದ ಸೊಗಡಿನ ಸಡಗರ
ನವ ಉಲ್ಲಾಸದ ತಿಲ್ಲಾನ;
ಸುಮಧುರ ಸುಸ್ವರ ಬೆಚ್ಚನೆ ಉಸಿರಿನ
ನಲಿವೇರಿಳಿತವೇ ತಿಲ್ಲಾನ..
ಪ್ರತಿ ಅಣು-ರೇಣುವೂ ಕಂಪಿಸಿ ನಲಿಯುವ
ಭಾವೋತ್ಕಟತೆಯು ತಿಲ್ಲಾನ;
ಕಣ-ಕಣ ವ್ಯಾಪಿಸಿ ಸಮ-ಸಮ ತಾಪಿಸೊ
ಜೀವೋನ್ಮಾದತೆ ತಿಲ್ಲಾನ..
ಜೀವೋನ್ಮಾದತೆ ತಿಲ್ಲಾನ..
ಮಧುರ ಲಾಲಿತ್ಯ ತಿಲ್ಲಾನ;
ಸಾಂಗೋಪಾಸನೆ ಸನಿಹ ಪ್ರಚೋದಿತ
ಅಧರ ಕದನವದು ತಿಲ್ಲಾನ..
ಮುತ್ತುಗಳಾದವು ನೆನಪಿನ ಸಂಚಯ
ಮೆದುಳಿನ ರಿಂಗಣ ತಿಲ್ಲಾನ;
ತೋಳಿಗೆ ತೋಳದು ತಾಕುತ ಸಾಗಲು
ಬೆರಳಿನ ಕಂಕಣ ತಿಲ್ಲಾನ..
ಸುರಚಿತ ಭಾವದ ಸೊಗಡಿನ ಸಡಗರ
ನವ ಉಲ್ಲಾಸದ ತಿಲ್ಲಾನ;
ಸುಮಧುರ ಸುಸ್ವರ ಬೆಚ್ಚನೆ ಉಸಿರಿನ
ನಲಿವೇರಿಳಿತವೇ ತಿಲ್ಲಾನ..
ಪ್ರತಿ ಅಣು-ರೇಣುವೂ ಕಂಪಿಸಿ ನಲಿಯುವ
ಭಾವೋತ್ಕಟತೆಯು ತಿಲ್ಲಾನ;
ಕಣ-ಕಣ ವ್ಯಾಪಿಸಿ ಸಮ-ಸಮ ತಾಪಿಸೊ
ಜೀವೋನ್ಮಾದತೆ ತಿಲ್ಲಾನ..
ಜೀವೋನ್ಮಾದತೆ ತಿಲ್ಲಾನ..
No comments:
Post a Comment