ಆಗಿ ಸನ್ನದ್ಧ ಮನಸು ಪರಿಶುಧ್ಧ
ಇಂತಿರುವನಕದೇ ದಾರಿ,
ಬಯಕೆ ಮಿಂದೆದ್ದ ಬದುಕು ಸಂದಿಗ್ಧ
ಅಂತರಿತವ ನಗುವ ರೂವಾರಿ.
ಆದಿ-ಬುನಾದಿ ತಿಳಿದ ಮುತ್ಸದ್ದಿ
ನಾನೆಂಬಹಂಗದ್ದೆಯ ಪೈರು,
ದತ್ತು ಬದುಕಿನ ಎರವಲು ಸಿದ್ಧಿಗೆ
ದಕ್ಷ ನಗುವಿನಾ ಗೈರು..
ಇಂತಿದ್ದರೂನು, ಸಂವತ್ಸರಾನೂ
ಹೊಸಚಿಗುರ ಮೊಳಕೆಯಿಡಲಿ,
ಬಾಳ್ವೆಯ ನವರಸ ಖೇದವಿಲ್ಲದಾ
ತಹಬಂದಿಯಲ್ಲಿ ನಿಲಲಿ..
No comments:
Post a Comment