ಚಂದ್ರನ ಕಂಡಾಗ ನೆನಪಾಗೊ ಕೈತುತ್ತು;
ಬಿದ್ದು ಗಾಯಗೊಂಡಾಗ,
ನೇವರಿಸಿ ನೀಡಿದ ಅಕ್ಕರೆಯ ಮುತ್ತು;
ನಿದ್ರೆಗೆ ಮುನ್ನುಡಿಯಂತೆ ಹಾಡಿದ ಲಾಲಿಯ ಮತ್ತು,
ಅಮ್ಮ, ನಿನ್ನ ನಿಷ್ಕಲ್ಮಶ ಮಮತೆಯೇ ನಂಗೆ ವರವು..
ಕೆಡುಕು ಕಾಡದಂತೆ ಕಾಪಾಡುವ ದೈವ;
ಬೆಂಗಾವಲಾಗಿ ನಿಂತ ಬಾಳಿನ ಬಲ;
ನನ್ನ ಕೇಳದೆಯೇ ಎಲ್ಲ ತಿಳಿದುಕೊಳ್ಳುವ,
ಅಮ್ಮ, ನಿನ್ನ ಅಪರಿಮಿತ ಪ್ರೀತಿಯೇ ನಂಗೆ ನಲಿವು..
ಅತ್ತಾಗ ಹೆಗಲಾಗಿ, ನಕ್ಕಾಗ ಖುಷಿಯಿಂದ ಹಿಗ್ಗುವ;
ನನ್ನ ಗೆಲುವೆಲ್ಲ ನಂಗಿಂತ ಮಿಗಿಲಾಗಿ ಆಚರಿಸುವ;
ಬಾಳಿನ ಪ್ರತಿ ಹೆಜ್ಜೆಗೂ ಸ್ಫೂರ್ತಿಯಾಗಿ ನಿಂತಿರುವ,
ಅಮ್ಮ, ನಿನ್ನ ಅಸಮಾನ ಮಮತೆಯೇ ನಂಗೆ ಬಲವು..
ಯಾರೇನಂದರೂ, ನನ್ನನೆಂದೂ ಬಿಟ್ಟುಕೊಡದ;
ನನ್ನ ನಿಂದಿಸುವವರಿಗೆ ಕಿಡಿಕಾರಿ ಸುಮ್ಮನಿರಿಸುವ;
ಅಖಂಡ ಎದುರಾಳಿಗೂ ಅಭೇದ್ಯ ಗೋಡೆಯಾಗಿ ನಿಂತ,
ಅಮ್ಮ, ನಿನ್ನ ಸಾಗರ ವಿಸ್ತೃತ ಪ್ರೀತಿಯೇ ನಂಗೆ ಕಾವಲು..

No comments:
Post a Comment