ನಾನೆಲ್ಲಿ ಕಳೆದ್ಹೋದೆ ಎನ್ನುತ್ತ ಹುಡುಕಲು
ಕಂಡದ್ದು ನನ್ನನ್ನು ನಿನ್ನಲ್ಲಿಯೇ,
ನನ್ನಯ ಕಣ್ಮುಚ್ಚಿ ಅವಿತಂತೆ ಆಟಾಡಿ
ಹುಡುಕೆ ನೀ ಸಿಕ್ಕದ್ದು ನನ್ನಲ್ಲಿಯೇ..
ಹಿತವಾದ ವೈರಾಣು ಮೈಯೆಲ್ಲ ವ್ಯಾಪಿಸುತ,
ಎಲ್ಲೆಲ್ಲೂ ಬಿಡದಲೆ ಜ್ವರದಂತೆ ಕಾಡುತ,
ಅಣು ಅಣುವೂ ನಿನ್ನದೇ ಧ್ಯಾನವನು ಮಾಡಿರಲು-
ತಲ್ಲೀನ ನಾ ನಿನ್ನ ನೆನಪಲ್ಲಿಯೇ..
ನಿನ್ನುಸಿರ ಏರಿಳಿತ ಬದುಕುವುದಕೆ ಸ್ಫೂರ್ತಿ,
ನಿಶ್ಯಬ್ಧವೇ ನಿಂತು ಅದನಾಲಿಸೋ ರೀತಿ,
ಮಾಯಾವಿ ನೀನಾಗಿ ನನ್ನನ್ನೆ ವ್ಯಾಪಿಸಲು-
ಪರಮಸುಖಿ ನಾ ನಿನ್ನ ವಶದಲ್ಲಿಯೇ..
ಭಾವ ತಂತಿಯ ನೀನು ಶೃತಿಬದ್ಧದಿ ಮೀಟಿ,
ಭಾವನೆಗಳ ಹುಂಡಿಯನು ಮಾಡಿರಲು ಲೂಟಿ,
ಬಹುಭಾವ ಮಿಶ್ರಿತ ಒಲವನ್ನು ತೋರುತಲಿ-
ಸಾಮ್ರಾಜ್ಞಿ ನೀ ನನ್ನ ಬದುಕಲ್ಲಿಯೇ..
ಕಂಡದ್ದು ನನ್ನನ್ನು ನಿನ್ನಲ್ಲಿಯೇ,
ನನ್ನಯ ಕಣ್ಮುಚ್ಚಿ ಅವಿತಂತೆ ಆಟಾಡಿ
ಹುಡುಕೆ ನೀ ಸಿಕ್ಕದ್ದು ನನ್ನಲ್ಲಿಯೇ..
ಹಿತವಾದ ವೈರಾಣು ಮೈಯೆಲ್ಲ ವ್ಯಾಪಿಸುತ,
ಎಲ್ಲೆಲ್ಲೂ ಬಿಡದಲೆ ಜ್ವರದಂತೆ ಕಾಡುತ,
ಅಣು ಅಣುವೂ ನಿನ್ನದೇ ಧ್ಯಾನವನು ಮಾಡಿರಲು-
ತಲ್ಲೀನ ನಾ ನಿನ್ನ ನೆನಪಲ್ಲಿಯೇ..
ನಿನ್ನುಸಿರ ಏರಿಳಿತ ಬದುಕುವುದಕೆ ಸ್ಫೂರ್ತಿ,
ನಿಶ್ಯಬ್ಧವೇ ನಿಂತು ಅದನಾಲಿಸೋ ರೀತಿ,
ಮಾಯಾವಿ ನೀನಾಗಿ ನನ್ನನ್ನೆ ವ್ಯಾಪಿಸಲು-
ಪರಮಸುಖಿ ನಾ ನಿನ್ನ ವಶದಲ್ಲಿಯೇ..
ಭಾವ ತಂತಿಯ ನೀನು ಶೃತಿಬದ್ಧದಿ ಮೀಟಿ,
ಭಾವನೆಗಳ ಹುಂಡಿಯನು ಮಾಡಿರಲು ಲೂಟಿ,
ಬಹುಭಾವ ಮಿಶ್ರಿತ ಒಲವನ್ನು ತೋರುತಲಿ-
ಸಾಮ್ರಾಜ್ಞಿ ನೀ ನನ್ನ ಬದುಕಲ್ಲಿಯೇ..
No comments:
Post a Comment