ಚಿರಂತನ ಗಾನ ನಿನ್ನಯ ನಗುವಿನ
ರಾಗವ ಬೆರೆಸಿ ಮೂಡುತಿದೆ;
ಪರವಶಗೊಳಿಸುವ ಚಂದದ ಮೋಹಕ
ಸುಂದರ ಸ್ವರಗಳ ಪೋಣಿಸಿದೆ.
ಅಮಲಿನ ರೂಪದಿ ಸಂಗೀತವನುನಿನ್ನಯ ಕಂಗಳು ಚಿಮ್ಮಿಸಿದೆ;ಸೋಜಿಗವೆಂಬ ಇಂಪದು ಒಂದುನಾಭಿಯ ಮೂಲದಿ ಉದಿಸುತಿದೆ.
ಕಣ್ಣುಬ್ಬದುವೆ ತಕಿಟ ಧೀಂ ತನನ
ತಾಳದ ತರದಲಿ ನರ್ತಿಸಿದೆ;
ಕೇಶ ರಾಶಿಯದು ಸುಲಲಿತ ಗಾನದ
ಮೋಡಿಗೆ ಸಿಲುಕಿ ತೇಲುತಿದೆ..
ಕರದಲಿ ರಿಂಗಣ ಬಳೆಗಳ ಸದ್ದುಹಾಡಿನ ಶ್ರುತಿಯನು ಸರಿಪಡಿಸಿ,ನನ್ನೆದೆ ತಾಳದ ಲಯ-ಗತಿಯನ್ನುಹಿಮ್ಮೇಳಕೆ ಸರಿದೂಗಿಸಿದೆ,ಸಮ್ಮಿಲನಕೆ ಪ್ರತಿಪಾದಿಸಿದೆ..
No comments:
Post a Comment