ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, December 12, 2016

ಕಂಬಳಿಯೇ ಗೆಳೆಯ..!!!

ಮನುಜನ ಏಕಾಂತಕೆ ಗುಟ್ಟೆಂಬುದೇ ಇಲ್ಲ,
ಇದೆಯಲ್ಲ ಎಂದಿಗೂ ಜೊತೆಗೊಂದು ಕಂಬ್ಳಿ;
ಕತ್ಲಲ್ಲಿ ಬೆಳಕಿನಾ ಸಾಥಿಯಂತಾಗಿ
ಇರುಳಿನಾ ಕುಶಲೋಪರಿ ಶುರುವಾಗೋದಲ್ಲಿ..

ಮಧುರ ನೆನಪಿಗೆ ಮೆಲುಕಿನಾ ಗೂಡು,
ಗುನುಗುವುದು ಮನವಲ್ಲಿ ಸಂಜೆಯಾ ರಾಗ;
ಸಾಂಗತ್ಯ ಶೂನ್ಯಕೆ ಕಂಬಳಿಯೇ ಮರುಗಿ
ತಾನಾಗೆ ಸಾಂತ್ವನವ ನೀಡುವುದು ಆಗ..

ಎಷ್ಟೆಲ್ಲ ಕನವರಿಕೆ ಮಂಪರಿನ ಗುಟ್ಟು,
ತನ್ನೊಳಗೆ ಮರೆಮಾಚಿ ನಗುವುದದು ಅಲ್ಲಿ;
"ಈ ಸರ್ತಿ ಚಳಿಗಾಲ ಬಂದಾಗಲೂನು,
ಒಬ್ನೇನ!!?" ಎನ್ನುವ ಕೀಟಲೆಯ ಚೆಲ್ಲಿ..

ದುಗುಡದಲಿ ಕಂಬನಿಯ ಒರೆಸುವಾ ರವಿಕೆ,
ಸಂತಸದಿ ಜೊತೆಯಾದ ಮುಸುಕಿನಾ ಜಾಡು;
ಸಾಂಗತ್ಯ-ಸಂಗಾತಿ ಇಲ್ದಿದ್ರೂ ಕೂಡ
ಕಂಬಳಿಯೇ ಹರಿಸುವುದು ಗೆಳೆತನದ ಹಾಡು..



No comments:

Post a Comment